Sunday, August 14, 2022

Latest Posts

ದೆಹಲಿಯಲ್ಲಿ ಹಕ್ಕಿ ಜ್ವರ ಭೀತಿ: ಚಿಕನ್ ಮಾರಾಟಕ್ಕೆ ಬ್ರೇಕ್ , ರೆಸ್ಟೋರೆಂಟ್​ಗಳಲ್ಲಿ ಸಿಗಲ್ಲ ಚಿಕನ್, ಮೊಟ್ಟೆ​

ಹೊಸ ದಿಗಂತ ಆನ್ ಲೈನ್ ಡೆಸ್ಕ್

ದೇಶದ ರಾಜಧಾನಿಯಲ್ಲಿ ಹಕ್ಕಿ ಜ್ವರ ಆತಂಕ ಮೂಡಿಸಿರುವ ಹಿನ್ನಲೆ ದೆಹಲಿಯ ಉತ್ತರ ಮತ್ತು ಪಾಲಿಕೆ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಕೋಳಿ ಮಾರಾಟ ಮತ್ತು ಕೋಳಿ ಮಾಂಸ ಸಾಗಾಟಕ್ಕೆ ಬುಧವಾರ ನಿರ್ಬಂಧ ಹೇರಲಾಗಿದೆ. ರೆಸ್ಟೋರೆಂಟ್​ಗಳಲ್ಲಿ ಚಿಕನ್, ಮೊಟ್ಟೆ​ ಆಹಾರವನ್ನೂ ಬಡಿಸದಂತೆ ಎನ್ ಡಿಎಂಸಿ ಮತ್ತು ಎಸ್ ಡಿಎಂಸಿ ತಿಳಿಸಿದೆ.
ಇಲ್ಲಿನ ಗಾಜಿಪುರ ಕೋಳಿ ಮಾರುಕಟ್ಟೆಯನ್ನು ಅಧಿಕಾರಿಗಳು ಬಂದ್​ ಮಾಡಿದ್ದು , ಎನ್​ಡಿಎಂಸಿ ವ್ಯಾಪ್ತಿಯ ಎಲ್ಲಾ ಕೋಳಿ ಮಾಂಸ ಮತ್ತು ಕೋಳಿ ಸಂಸ್ಕರಣಾ ಘಟಕ ಬಂದ್​ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಮಾರಾಟ ನಿಷೇಧ ಮುಂದುವರೆಯಲಿದೆ.
ನಗರದಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ದೆಹಲಿ ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದೆ. ಜನರು ಅರ್ಧ ಬೇಯಿಸಿದ ಚಿಕನ್, ಅರ್ಧ ಬೇಯಿಸಿದ ಅಥವಾ ಅರ್ಧ ಹುರಿದ ಮೊಟ್ಟೆಗಳನ್ನು ಸೇವಿಸಬಾರದು ಎಂದು ಆದೇಶ ಹೊರಡಿಸಿದೆ. ಸಂಜಯ್ ಸರೋವರದ ಹಲವಾರು ಬಾತುಕೋಳಿಗಳು ಮತ್ತು ನಗರದ ವಿವಿಧ ಉದ್ಯಾನಗಳಲ್ಲಿ ಕಳೆದ ಒಂದು ವಾರದಲ್ಲಿ ಹಲವು ಕಾಗೆಗಳು ಸತ್ತಿರುವುದು ಕಂಡುಬಂದಿದ್ದು, ನಗರದ ಗಡಿಭಾಗದಲ್ಲಿ ಅನಧಿಕೃತವಾಗಿ ಜಾನುವಾರು, ಕೋಳಿ ಮಾಂಸ ವನ್ನು ಹೊರಭಾಗದಿಂದ ಹೊರಬರದಂತೆ ತಡೆಯಲು ಕಂದಾಯ ಇಲಾಖೆ ಸ್ವಯಂ ಸೇವಕರ ತಂಡಗಳನ್ನೂ ನಿಯೋಜಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss