ಹೊಸದಿಲ್ಲಿ: ದೆಹಲಿ ಪೊಲೀಸರ ವಿಶೇಷ ತಂಡ ಕಳೆದ ರಾತ್ರಿ ನಡೆದ ಗುಂಡಿನ ದಾಳಿಯ ನಂತರ ರಾಷ್ಟ್ರ ರಾಜಧಾನಿಯ ಧೌಲಾ ಕುವಾನ್ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರನನ್ನು ಬಂಧಿಸಿದ್ದಾರೆ.
ಉಗ್ರನನ್ನು ಉತ್ತರ ಪ್ರದೇಶದ ನಿವಾಸಿ ಅಬ್ದುಲ್ ಯೂಸುಫ್ ಖಾನ್ ಎಂದು ಗುರುತಿಸಲಾಗಿದೆ. ಧೌಲಾ ಕುವಾನ್ ಮತ್ತು ಕರೋಲ್ ಬಾಗ್ ನಡುವಿನ ರಿಡ್ಜ್ ರಸ್ತೆ ಬಳಿ ಆತನನ್ನು ಬಂಧಿಸಲಾಗಿದೆ. ಆತನ ಬಳಿಯಿದ್ದ ಪಿಸ್ತೂಲ್ ಅನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಂದಾಜು 15 ಕಿಲೋಗ್ರಾಂಗಳಷ್ಟು ತೂಕದ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾಗಿದೆ. ಖಾನ್ ತನ್ನ ಟಿವಿಎಸ್ ಅಪಾಚೆ ಮೋಟಾರುಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
One ISIS operative arrested with Improvised Explosive Devices (IEDs) by our Special Cell after an exchange of fire at Dhaula Kuan: Pramod Singh Kushwaha, Delhi Deputy Commissioner of Police (DCP), Delhi Police Special Cell pic.twitter.com/nIJrR03iUA
— ANI (@ANI) August 22, 2020