Thursday, August 11, 2022

Latest Posts

ದೆಹಲಿಯ ಅಜ್ಜಿಮನೆಯಿಂದ ಬೆಂಗಳೂರಿಗೆ ವಿಮಾನದಲ್ಲಿ ಏಕಾಂಗಿಯಾಗಿ ಬಂದಿಳಿದ ಈ ಪೋರ!

ಬೆಂಗಳೂರು: ಐದು ವರ್ಷದ ಪೋರನೋರ್ವ ವಿಮಾನದಲ್ಲಿ ಏಕಾಂಗಿಯಾಗಿ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿ ಈಗ ತನ್ನ ತಾಯಿ ಮಡಿಲು ಸೇರಿದ್ದಾನೆ.
ಈತ ದೆಹಲಿಯಲ್ಲಿರುವ ತನ್ನ ಅಜ್ಜಿ ಮನೆಗೆ ತೆರಳಿದ್ದ. ಅದಾದ ಬಳಿಕ ದೇಶದಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಪರಿಣಾಮ ಬಾಲಕ ಸುಮಾರು ಮೂರೂ ತಿಂಗಳು ಅಜ್ಜಿ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿತ್ತು. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅಧಿಕಾರಿಗಳು ಆತನನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಸೋಮವಾರ ಮೊದಲ ಬಾರಿಗೆ ಬಂದ ವಿಮಾನದಲ್ಲಿ ಈ ಪೋರ ಇತರ ಪ್ರಯಾಣಿಕರೊಂದಿಗೆ ಏಕಾಂಗಿಯಾಗಿ ಪ್ರಯಾಣ ಮಾಡಿದ್ದಾನೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತನಿಗಾಗಿ ಕಾದಿದ್ದ ತಾಯಿ ಬಳಿಕ ಮಗನನ್ನು ಕೆರೆದೊಯ್ದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss