ಹೊಸದಿಲ್ಲಿ: ದೆಹಲಿಯ ರೋಹಿಣಿ ಜೈಲಿನಲ್ಲಿರುವ ಕೈದಿಯೋರ್ವನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಇದರಿಂದ ಇನ್ನುಳಿದ 19 ಕೈದಿಗಳನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು ಈ ಪೈಕಿ 15 ಕೈದಿಗಳಿಗೆ ಕೊರೋನಾ ಸೋಂಕಿರುವುದು ಪರೀಕ್ಷೆ ವೇಳೆ ಗೊತ್ತಾಗಿದೆ.
ಪರೀಕ್ಷೆಗೆ ಒಳಪಟ್ಟ ಕೈದಿಗಳಲ್ಲಿ ಜೈಲಿನ ಓರ್ವ ಸಿಬ್ಬಂದಿ ಸೇರಿ ಕೈದಿಗಳಿಗೆ ಕೊರೋನಾ ತಗುಲಿದೆ. ಓರ್ವ ಕೈದಿಗೆ ದೆಹಲಿ ಡಿಡಿಯು ಆಸ್ಪತ್ರೆ ಯಲ್ಲಿ ಕೊರೊನಾ ಪರೀಕ್ಷಿಸಲಾಗಿದ್ದು ಆತನ ವರದಿ ಪಾಸಿಟಿವ್ ಬಂದಿದೆ. 15 ಮಂದಿಗೆ ಕೊರೋನಾ ಸೋಂಕಿರುವವರನ್ನು ಬ್ಯಾರಕ್ ಅನ್ನು ಹಂಚಿಕೊಂಡಿದ್ದು ಇದೀಗ 15 ಮಂದಿಗೆ ಕೊರೋನಾ ದೃಢಪಟ್ಟಿದೆ ಎಂದು ಕಾರಾಗ್ರಹ ವಿಭಾಗದ ಡಿ.ಜಿ ಸಂದೀಪ್ ಗೋಯೆಲ್ ತಿಳಿಸಿದ್ದಾರೆ.
5 ಸಿಬ್ಬಂದಿಗಳಲ್ಲಿ ಓರ್ವ ಸಿಬ್ಬಂದಿಗೆ ಕೊರೋನಾ ತಗುಲಿದ್ದು, ಕೈದಿಗಳನ್ನು ಬೇರೆ ಬೇರೆ ಇರಿಸಿ ಕ್ವಾರಂಟೈನ್ ಮಾಡುವುದರ ಜೊತೆಗೆ ಚಿಕಿತ್ಸೆ ಯನ್ನು ನೀಡಲಾಗುತ್ತಿದೆ.