ಹೊಸದಿಲ್ಲಿ: ದೆಹಲಿಯಲ್ಲಿ ಸಿಎಎ ವಿರುದ್ದದ ಪ್ರತಿಭಟನೆಯ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಸಾವಿನ ಸಂಖ್ಯೆ 10ಕ್ಕೆ ಏರಿದೆ.
ಈ ಹಿನ್ನಲೆ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರೀವಾಲ್ ಸಭೆ ನಡೆಸಿ ಗಲಭೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಇಂದು ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರೀವಾಲ್ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರದ ಪ್ರತಿಭಟನೆಯ ಕುರಿತು ಚರ್ಚೆ ನಡೆಸಿದರು.
ಮಾಧ್ಯಮಕ್ಕೆ ಮಾತನಾಡಿದ ಕೇಜ್ರೀವಾಲ್ ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಈ ಬೆಳವಣಿಗೆಗಳು ಆತಂಕವನ್ನು ಉಂಟುಮಾಡಿವೆ. ಪರಿಸ್ಥಿಯನ್ನು ನಿಯಂತ್ರಣಕ್ಕೆ ತರಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಆದರೆ ಅಗತ್ಯವೆನಿಸಿದರೆ ಸೇನೆಯ ಸಹಾಯವನ್ನು ಪಡೆಯಬಹುದೆಂಬ ವಿಶ್ವಾಸವನ್ನು ಗೃಹ ಸಚಿವ ಅಮಿತ್ ಶಾ ನೀಡಿದ್ದಾರೆ ಎಂದು ತಿಳಿಸಿದರು.
ಇಂದು ಹಿಂಸಾಚಾರಕ್ಕೆ ಗುರಿಯಾಗಿ ನಾಲ್ಕು ಜನ ಬಲಿಯಾಗಿದ್ದಾರೆ,ಈ ಹಿನ್ನಲೆ ಇದುವರೆಗೂ ದೆಹಲಿಯ ಪ್ರತಿಭಟನೆಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಜಿಟಿಬಿ ಆಸ್ಪತ್ರೆಯ ವೈದ್ಯಾಧಿಕಾರಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
Dr Sunil Kumar, Medical Superintendent of Guru Teg Bahadur (GTB) Hospital, Delhi: Total 10 deaths and 150 injured admitted at GTB Hospital in the last 24 hours. #DelhiViolence pic.twitter.com/O729x0OqPM
— ANI (@ANI) February 25, 2020