ದೆಹಲಿ| ಇಂದಿನಿಂದ ಖಾಸಗಿ ಮದ್ಯದಂಗಡಿಯಲ್ಲಿ ಷರತ್ತು ಬದ್ಧ ಮದ್ಯ ಮಾರಾಟ

0
89

ಹೊಸದಿಲ್ಲಿ: ಲಾಕ್ ಡೌನ್ ನಿಂದಾಗಿ ಲಾಕ್ ಆಗಿದ್ದ ದೆಹಲಿಯ ಖಾಸಗಿ ಮದ್ಯದಂಗಳು ಇಂದಿನಿಂದ ಷರತ್ತು ಬದ್ಧವಾಗಿ ವ್ಯಾಪಾರ ಆರಂಭಿಸಲು ದೆಹಲಿ ಅಬಕಾರಿ ಇಲಾಖೆ ಅವಕಾಶ ನೀಡಿದೆ.

ದೆಹಲಿಯಲ್ಲಿ 389 ಖಾಸಗಿ ಮದ್ಯದಂಗಡಿಗಳಿದ್ದು, ಈ ಪೈಕಿ 66 ಮದ್ಯದ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಎಲ್-7,ಎಲ್-9 ಮಳಿಗೆಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, 150 ಮದ್ಯದಂಗಡಿಗಳು ಮಾಲ್ ಗಳಲ್ಲಿವೆ.

ಮದ್ಯ ಮಾರಾಟಕ್ಕೆ ಹಲವು ನಿಯಮಗಳನ್ನು ವಿಧಿಸಿದ್ದು ಲಾಕ್ ಡೌನ್ ಇರುವ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ. ಬೆಳಿಗ್ಗೆ 9 ಗಂಟೆಯಿಂದ ಸಂಜೆ 6:30 ವರೆಗೆ ಮಾತ್ರ ಮಾರಾಟ ಮಾಡಬೇಕು ಹಾಗೂ ಮದ್ಯದಂಗಡಿ ಮುಂದೆ ಭದ್ರತಾ ಸಿಬ್ಬಂದಿಗಳು ಇರಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಒಂದು ವೇಳೆ ನಿಯಮಗಳನ್ನು ಪಾಲಿಸಿಲ್ಲವಾದರೆ ಅಂತಹ ಮದ್ಯದಂಗಡಿಗಳ ಪರವಾನಗಿಯನ್ನು ರದ್ದು ಮಾಡುವುದಾಗಿ ಅಬಕಾರಿ ಇಲಾಖೆ ತಿಳಿಸಿದೆ.

ಕೇರಳ ರಾಜ್ಯದಲ್ಲಿ ಇನ್ನೂ ಮದ್ಯ ಮಾರಾಟಕ್ಕೆ ಅವಕಾಶ ನೀಡದೇ ಇರುವುದು ಇಲ್ಲಿ ಗಮನಾರ್ಹ.

LEAVE A REPLY

Please enter your comment!
Please enter your name here