ದೆಹಲಿ ಕೋಮುಗಲಭೆ: ಪಿ.ಎಫ್.ಐ ರಾಜ್ಯಾಧ್ಯಕ್ಷ ಪರ್ವೇಜ್ ಹಾಗೂ ಕಾರ್ಯದರ್ಶಿ ಇಲಿಯಾಸ್ ಬಂಧನ

0
124

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್.ಆರ್.ಸಿ ಕಾಯ್ದೆ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ ಎಫ್ ಐ)ದ ರಾಜ್ಯಾಧ್ಯಕ್ಷ ಪರ್ವೇಜ್ ಅಹಮದ್ ಹಾಗೂ ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್ ಅವರನ್ನು ಬಂಧಿಸಲಾಗಿದೆ.

ದೆಹಲಿಯಲ್ಲಿ ನಡೆದ ಗಲಭೆಗೆ ಜನರನ್ನು ಪೂರೈಕೆ ಮಾಡಿರುವ ಆರೋಪದೊಂದಿಗೆ, ಕೋಮುಗಲಭೆಗೆ ಪರ್ವೇಜ್ ಅಹಮದ್ ಬಂಡವಾಳ ಹೂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಇಂದು ಅಥವಾ ನಾಳೆ ಪರ್ವೇಜ್ ಮತ್ತು ಇಲಿಯಾಸ್ ಅವರನ್ನು ಪೊಲೀಸರು ದೆಹಲಿ ಪಟಿಯಾಲ ಹೌಸ್ ಕೋರ್ಟ್​ ಗೆ ಹಾಜರುಪಡಿಸಲಿದ್ದಾರೆ.

LEAVE A REPLY

Please enter your comment!
Please enter your name here