Thursday, August 11, 2022

Latest Posts

ದೆಹಲಿ ಜನತೆಗೆ ಖುಷಿಕೊಟ್ಟ ಏಷ್ಯಾದ ಅತಿದೊಡ್ಡ ಮಾರುಕಟ್ಟೆಯ ಹಕ್ಕಿಜ್ವರದ ರಿಪೋರ್ಟ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಹಕ್ಕಿಜ್ವರದ ಭೀತಿ ನಡುವೆ ಹೊರಬಿತ್ತು ಚಿಕನ್ ಪ್ರಿಯರಿಗೆ ಗುಡ್ ನ್ಯೂಸ್. ಏಷ್ಯಾದ ಅತಿದೊಡ್ಡ ಮಾರುಕಟ್ಟೆಯಾದ ದೆಹಲಿಯ ಗಾಜಿಪುರದಲ್ಲಿ ಹಕ್ಕಿಜ್ವರದ ಭೀತಿಯಿಂದ ನೂರು ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಇದೀಗ ಇದರಲ್ಲಿ ಹಕ್ಕಿ ಜ್ವರದ ಅಂಶ ಕಂಡುಬಂದಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಸದ್ಯ ದೆಹಲಿಯ ಮಂದಿ ನಿರಾಳರಾಗಿದ್ದಾರೆ.
ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರ ಮಾರುಕಟ್ಟೆ, ಕೋಳಿ, ಬಾತುಕೋಳಿ, ಮೊಟ್ಟೆ ಗಳ ಪೂರೈಕೆ ಮಾಡುವ ಪ್ರಮುಖ ಮಾರುಕಟ್ಟೆಯಾಗಿದೆ. ಈ ಮಾರುಕಟ್ಟೆಯುಂದ 104 ಮಾದರಿ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 100 ಕೋಳಿಗಳ ಮಾದರಿಯನ್ನು ಸಂಗ್ರಹಿಸಲಾಗಿತ್ತು ಎಂದು ಪಶುಸಂಗೋಪನಾ ಅಧಿಕಾರಿ ರಾಕೇಶ್​ ಸಿಂಗ್​ ತಿಳಿಸಿದ್ದಾರೆ.
ಇದೀಗ ಕೋಳಿ ಮಾಂಸ ಮಾರಾಟದ ಮೇಲೆ ಹೇರಲಾಗಿದ್ದ ತಾತ್ಕಲಿಕ ನಿಷೇಧವನ್ನು ದೆಹಲಿ ಸರ್ಕಾರ ಹಿಂದಕ್ಕೆ ಪಡೆದಿದೆ.
ದೆಹಲಿಯ ಕೆಲವು ಪ್ರದೇಶಗಳಲ್ಲಿ ಸತ್ತ ಕಾಗೆ ಹಾಗೂ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೋಳಿ ಮಾಂಸ ಮಾರಾಟ, ಸಾಗಾಟಕ್ಕೆ ನಿಷೇಧ ಹೇರಲಾಗಿತ್ತು. ಅಲ್ಲದೇ ಹೋಟೆಲ್​, ರೆಸ್ಟೋರೆಂಟ್​ಗಳಲ್ಲಿಯೂ ಕೋಳಿ ಮತ್ತು ಮೊಟ್ಟೆ ಆಹಾರವನ್ನು ಸರಬರಾಜು ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು.
ಇದೀಗ ನೆಗೆಟಿವ್‌ ಬಂದಿರುವ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ದೆಹಲಿಯಲ್ಲಿ ಕೋಳಿಗಳಲ್ಲಿ ಹಕ್ಕಿ ಜ್ವರ ಹರಡುತ್ತಿಲ್ಲ ಎಂಬುದು ಇದರಿಂದ ಅರ್ಥವಾಗಿದೆ. ಆದಾಗ್ಯೂ, ನಾಲ್ಕು ಮಾದರಿಗಳಲ್ಲಿ ಶಂಕೆ ವ್ಯಕ್ತವಾಗಿದ್ದು, ಸ್ಪಷ್ಟತೆಗಾಗಿ ಭೂಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss