ಮಂಗಳೂರು: ಮಂಗಳೂರು ವಿಭಾಗದ ಸಹಾಯಕ ಆಯುಕ್ತ ಮದನ ಮೋಹನ್ ಶನಿವಾರ ಮಧ್ಯಾಹ್ನ ದೇರಳಕಟ್ಟೆಯ ನಿರ್ಮಾಣ ನಿವೇಶನಕ್ಕೆ ದಾಳಿ ನಡೆಸಿದ್ದಾರೆ.
ನಿವೇಶನದಲ್ಲಿ ಮಣ್ಣು ತೆರವು ಕಾರ್ಯದಲ್ಲಿ ತೊಡಗಿದ್ದ ಟಿಪ್ಪರ್, ಜೆಸಿಬಿ ಮತ್ತು ಹಿತಾಚಿಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಐದು ಟಿಪ್ಪರ್, ಮೂರು ಹಿತಾಚಿ ಮತ್ತು ಎರಡು ಜೆಸಿಬಿಗಳು ಕೆಲಸದಲ್ಲಿ ನಿರತ ವಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ. ವಶ ಪಡಿಸಿಕೊಂಡ ವಾಹನಗಳಿಗೆ ಪೊಲೀಸ್ ಕಾವಲು ಹಾಕಲಾಗಿದೆ.
ಸಹಾಯಕ ಆಯುಕ್ತರು ಕೆಲವು ದಿನಗಳ ಹಿಂದೆ ಮುಡಿಪು ಪರಿಸರದಲ್ಲಿ ದಾಳಿ ನಡೆಸಿ ಬಾಕ್ಸೈಟ್ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಬಹು ಚಕ್ರದ ಲಾರಿಗಳು, ಜೆಸಿಬಿ, ಹಿತಾಚಿಗಳನ್ನು ಸ್ವಾಧೀನ ಪಡಿಸಿಕೊಂಡಿದ್ದರು.