ಮಂಗಳೂರು: ಕುಂಬಳೆ ಸೀಮೆಯ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ತಂತ್ರ ಕರ್ಮದ ಹಕ್ಕನ್ನುಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳಿಗೆ ಶನಿವಾರ ಶ್ರೀ ಕ್ಷೇತ್ರದಲ್ಲಿ ಹಸ್ತಾಂತರಿಸಲಾಯಿತು.
ಸೀಮೆಯ ರಾಜರಾದ ಮಾಯಿಪ್ಪಾಡಿ ಶ್ರೀ ದಾನಮಾರ್ತಾಂಡವರ್ಮರಾಜ ಯಾನೆ ರಾಮಂತರಸುಗಳು, ಮಾಯಿಪ್ಪಾಡಿ ಅರಮನೆ ಮತ್ತು ರಾಜಗುರು ಶ್ರೀ ಚಕ್ರಪಾಣಿ ದೇವಪೂಜಿತ್ತಾಯ ಹಾಗೂ ಸೀಮೆಯ ಎಂಟು ಮನೆಯ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.