ನೀವು ದೇವಸ್ಥಾನ ಪ್ರವೇಶಿಸುತ್ತಿದ್ದಂತೆಯೇ ಮೊದಲು ದೇವರ ಬದಲು ನಿಮ್ಮ ಕಣ್ಣಿಗೆ ಕಾಣಿಸುವುದು ತೂಗಿ ಬಿಟ್ಟಿರುವ ಘಂಟೆಗಳು. ಮೊದಲು ಘಂಟೆ ಭಾರಿಸಿ ನಂತರ ದೇವರಿಗೆ ಸಮಸ್ಕರಿಸುತ್ತೀರಿ. ಯಾಕೆ ಪ್ರತಿ ದೇವಸ್ಥಾನದಲ್ಲಿಯೂ ಗಂಘೆ ಇರುತ್ತದೆ? ದೇವಸ್ಥಾನದಲ್ಲಿ ಘಂಟೆ ಬಳಸುವುದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಇಲ್ಲಿದೆ ನೋಡಿ…
ಘಂಟಾನಾದದಿಂದ ದುಷ್ಟ ಶಕ್ತಿಗಳು ದೇವಸ್ಥಾನವನ್ನು ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಘಂಟಾನಾದ ದೇವರಿಗೆ ಆನಂದವನ್ನುಂಟು ಮಾಡುತ್ತದೆ ಎಂದು ಆಗಮ ಶಾಸ್ತ್ರ ತಿಳಿಸುತ್ತದೆ.
ವೈಜ್ಞಾನಿಕ ಕಾರಣವೇನೆಂದರೆ… ದೇವಾಲಯದ ಘಂಟೆಗಳು ಸಾಮಾನ್ಯವಾಗಿ ಕ್ಯಾಡ್ಮಿಯಮ್, ಸೀಸ, ತಾಮ್ರ, ಸತು, ನಿಕಲ್, ಕ್ರೋಮಿಯಂ ಮತ್ತು ಮ್ಯಾಂಗನೀಸ್ಗಳನ್ನು ಒಳಗೊಂಡಿರುತ್ತದೆ. ಈ ಘಂಟೆಯನ್ನು ಭಾರಿಸಿದಾಗ ಹೊರಹೊಮ್ಮುವ ಶಬ್ದ ನಮ್ಮ ಮನದಲ್ಲಿರುವ ದುರ್ಭಾವನೆಗಳನ್ನು ದೂರವಾಗಿಸಿ, ಏಕಾಗ್ರ ಚಿತ್ತದಿಂದ ಅಂದಿನ ಕಾರ್ಯಗಳು ಸೂಸುತ್ರವಾಗಿ ನಡೆಸಲು ಪೂರಕವೆನಿಸುತ್ತದೆ.
ಇನ್ನೊಂದು ಮುಖ್ಯ ಕಾರಣವೆಂದರೆ ಘಂಟೆಗಳು ಮೊಳಗಿದಾಗ ವಾತಾವರಣದಲ್ಲಿ ಕಂಪನವು ಸೃಷ್ಟಿಯಾಗುತ್ತದೆ. ಇದು ಗಾಳಿಯ ಹರಿವಿನೊಂದಿಗೆ ತುಂಬಾ ದೂರದಲ್ಲಿ ಹರಡುತ್ತವೆ. ಈ ಕಂಪನಕ್ಕೆ ಒಳಗಾಗುವ ಅಪಾಯಕಾರಿ ಕೀಟಗಳು, ಕಣಗಳು ಮತ್ತು ಋಣಾತ್ಮಕ ಶಕ್ತಿಗಳು ಸಾಯುತ್ತವೆ. ವಾತಾವರಣವು ಸ್ವಚ್ಛ ಹಾಗೂ ಆರೋಗ್ಯಕರವಾಗಿ ಇರುತ್ತದೆ ಎಂದು ಹೇಳಲಾಗುವುದು.