spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇವಸ್ಥಾನ, ಮಸೀದಿ ತೆರವು ವಿಚಾರ ಬಹಳ ಸೂಕ್ಷ್ಮ: ಮಾಜಿ ಸಿಎಂ ಜಗದೀಶ್ ಶೆಟ್ಟರ್ 

- Advertisement -Nitte

ಹೊಸದಿಗಂತ ವರದಿ, ಹುಬ್ಬಳ್ಳಿ:

ದೇವಸ್ಥಾನ, ಮಸೀದಿ ಮತ್ತು ಮಂದಿರ ತೆರವು ವಿಚಾರ ಬಹಳ ಸೂಕ್ಷ್ಮವಾಗಿದೆ. ಇದು  ಸುಪ್ರೀಂ ಕೋರ್ಟ್ ವಿಚಾರವಾಗಿದ್ದರಿಂದ ಅಧಿಕಾರಿಗಳು ಬಹಳ ಸಮಾಲೋಚನೆ ಮಾಡಿ ತೆರವು ಮಾಡುವಂತಹ ಕಾರ್ಯವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ವಿಕಲಚೇತನರಿಗೆ ತ್ರೀಚಕ್ರವಾಹನ ನೀಡಿ ಮಾತನಾಡಿ, ಅಧಿಕಾರಿಗಳು ತರಾತುರಿಯಲ್ಲಿ ಈ ಕಾರ್ಯದಲ್ಲಿ ತೊಡಗಬಾರದು ಏಕೆಂದರೆ ನೂರಾರು ವರ್ಷಗಳಿಂದ ದೇವಸ್ಥಾನ ಮಸೀದಿಗಳು ಅಲ್ಲಿರುವುದರಿಂದ ಸ್ಥಳಿಯರೊಂದಿಗೆ ಸೂಕ್ತ ಸಮಾಲೋಚನೆ ಮಾಡಿ, ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕಾರ್ಯ ಮಾಡಬೇಕು ಎಂದರು. ಸುಪ್ರೀಂ ಕೋರ್ಟ್ ಸಹ ಕೆಲವು ನಿರ್ದೇಶನಗಳನ್ನು ನೀಡಿದೆ ಅದರನ್ವಯ ಅಧಿಕಾರಿಗಳು ಪಾಲನೆ ಮಾಡಬೇಕು. ಆದರೆ ಇತ್ತೀಚಿಗೆ ಅಧಿಕಾರಿಗಳಿಂದ ತಪ್ಪಾಗಿದೆ ಮುಂದಿನ ದಿನಮಾನಗಳಲ್ಲಿ ಆ ರೀತಿಯ ಕೆಲಸವಾಗಬಾರದು ಎಂದು ತಿಳಿಸಿದರು.

ನಗರದಲ್ಲಿ ರಸ್ತೆ ಮಧ್ಯದಲ್ಲಿರುವ ಮಂದಿರ ಮಸೀದಿಗಳು ಇವೆ ಅವುಗಳನ್ನು ತೆರವುಗೊಳಿಸುವ ಬಗ್ಗೆ ಅಧಿಕಾರಿಗಳು ಬೇಜವಬ್ದಾರಿ ತನ ಮಾಡಿದ್ದಾರೆ. ಅದರ ಬಗ್ಗೆ ಕೇಂದ್ರ ಸಚಿವರು ಮತ್ತು ನಾವು ಅಧಿಕಾರಿಗಳ ಜೊತೆ ಸುಧೀರ್ಘವಾಗಿ ಸಭೆ ಮಾಡಿ ಚರ್ಚಿಸಿದ್ದೇನೆ. ಅಧಿಕಾರಿಗಳು ಸ್ಥಳಿಯರ ವಿಶ್ವಾಸ ತೆಗೆದುಕೊಂಡು ತಮ್ಮ ಕರ್ತವ್ಯ ಮಾಡಲಿ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss