Sunday, June 26, 2022

Latest Posts

ದೇವಾಲಯಗಳ ಹುಂಡಿಗೆ ಕಮ್ಯೂನಿಸ್ಟ್ ಸರಕಾರ ಕನ್ನ| ಗುರುವಾಯೂರು ಕ್ಷೇತ್ರದಿಂದ 5 ಕೋಟಿ ರೂ. ಎತ್ತಿದ ಎಡರಂಗ

ಕಾಸರಗೋಡು: ಸಿಪಿಎಂ ನೇತೃತ್ವದ ಕೇರಳ ರಾಜ್ಯ ಸರಕಾರವು ಇದೀಗ ಹಿಂದೂ ದೇವಾಲಯಗಳ ಕಾಣಿಕೆ ಹುಂಡಿಗೆ ಕನ್ನ ಹಾಕಲು ಹೊರಟಿದೆ. ಅದರಂತೆ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದ ಆದಾಯದಿಂದ ಬರೋಬ್ಬರಿ 5 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದೆ. ಈ ಮುಲಕ ಹಿಂದೂ ಧಾರ್ಮಿಕ ಕೇಂದ್ರಗಳ ಹಾಗೂ ಹಿಂದೂ ದೇಗುಲಗಳ ವಿರುದ್ಧ ಕಾರ್ಯಾಚರಿಸುತ್ತಿರುವ ಎಡರಂಗ ಸರಕಾರದ ಬೊಕ್ಕಸ ತುಂಬಲು ಅದೇ ಹಿಂದೂ ದೇವಾಲಯದ ಹುಂಡಿ ಹಣವೇ ಬೇಕಾಯಿತು.
ದೇವಸ್ಥಾನದಿಂದ ಯಾವುದೇ ಉಪಯೋಗವಿಲ್ಲ ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವ ಕಮ್ಯೂನಿಸ್ಟ್ ಪಕ್ಷದ ಮುಖಂಡರು ಈ ವಿಚಾರದಲ್ಲಿ ಏನು ಹೇಳಲು ಬಯಸಿದ್ದಾರೆ ಎಂಬುದು ಭಕ್ತಜನರ ಪ್ರಶ್ನೆಯಾಗಿದೆ. ಕೇರಳದಲ್ಲಿ ಕೋಟಿಗಟ್ಟಲೆ ಆದಾಯವಿರುವ ಹಿಂದೂ ಪವಿತ್ರ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಪಿಣರಾಯಿ ವಿಜಯನ್ ಸರಕಾರದ ಈ ಧೋರಣೆ ವಿರುದ್ಧ ಭಕ್ತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಆಚಾರ ಅನುಷ್ಠಾನಗಳನ್ನು ಗಾಳಿಗೆ ತೂರಿ ಪರಮ ಪವಿತ್ರ ಶಬರಿಮಲೆ ಶ್ರೀ ಧರ್ಮಶಾಸ್ತಾ ದೇವಾಲಯಕ್ಕೆ ಯುವತಿಯರನ್ನು ಕಳುಹಿಸಿದ ಕೇರಳ ಸರಕಾರದಿಂದ ಹಿಂದೂಗಳ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಕೊರೋನಾ ಸಮಸ್ಯೆಯಿಂದಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎಂಬ ನೆಪವೊಡ್ಡಿ ಎಡರಂಗ ಸರಕಾರವು ಕೋಟಿಗಟ್ಟಲೆ ಆದಾಯವಿರುವ ದೇವಾಲಯಗಳ ಆದಾಯದ ಮೇಲೆ ವಕ್ರದೃಷ್ಟಿ ಬೀರಿದ್ದು, ಕಾಸರಗೋಡು ಜಿಲ್ಲೆಯ ಕೆಲವೊಂದು ದೇವಾಲಯಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss