Monday, August 8, 2022

Latest Posts

ದೇಶಕ್ಕೆ ಒಂದೇ ಹೆಸರು| ‘ಭಾರತ್’ ಎಂದು ನಾಮಕರಣ ಮಾಡಲು ಇಂದು ಸುಪ್ರೀಂ ವಿಚಾರಣೆ

ಹೊಸದಿಲ್ಲಿ: ಭಾರತ ಆಗಲಿ, ಇಂಡಿಯಾ ಆಗಲಿ ಅಥವಾ ಗಣರಾಜ್ಯ ಭಾರತ ಆಗಲಿ, ದೇಶವನ್ನು ಉಲ್ಲೇಖಿಸುವಾಗ ಏಕರೂಪವಿರಬೇಕು ಎಂದು ಅರ್ಜಿದಾರರಾದ ನಮಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಜೂನ್ 2ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಭಾರತಕ್ಕೆ ಸಾಕಷ್ಟು ಹೆಸರುಗಳಿದ್ದು, ಭಾರತದ ಹೆಸರು ಒಂದಾಗಿರಬೇಕು ರಿಪಬ್ಲಿಕ್ ಆಫ್ ಇಂಡಿಯಾ, ಭಾರತ, ಇಂಡಿಯಾ ಮುಂತಾದ ಹೆಸರುಗಳಿವೆ. ರಾಷ್ಟ್ರೀಯ ದಾಖಲೆಗಳಲ್ಲಿ ವಿಭಿನ್ನ ಹೆಸರುಗಳಿದ್ದು, ಆದಾರ್ ಕಾರ್ಡ್  ನಲ್ಲಿ ಭಾರತ್ ಸರ್ಕಾರ್, ವಾಹನ ಪರವಾನಗಿಯಲ್ಲಿ ಯುನಿಯನ್ ಆಫ್ ಇಂಡಿಯಾ, ಪಾಸ್ ಪೋರ್ಟ್ ನಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಎಂದಿರುವುದರಿಂದ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ತಿಳಿಸಿದರು.

ನಮಾ ಅವರು ಸಲ್ಲಿಸಿದ ಅರ್ಜಿಯನ್ನು ಮೇ 29ರಂದು ವಿಚಾರಣೆ ನಡೆಸಿದ್ದು, ಮುಖ್ಯ ನ್ಯಾಯಮೂರ್ತಿ ಸಿಜಿಐ ಎಸ್ ಎ ಬೋಬ್ಡೆ ಲಭ್ಯವಿಲ್ಲದ ಕಾರಣ ಅದನ್ನು ಮುಂದೂಡಲಾಗಿತ್ತು. ಇಂದು ಈ ವಿಚಾರಣೆ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss