ಮುಂಬೈ: ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ 1.12 ಲಕ್ಷಕ್ಕೆ ಏರಿಕೆಯಾಗಿದ್ದು, ಅದರ ಬಹುಪಾಲು ಕೊರೋನಾ ಸಂಖ್ಯೆ ನೀಡಿದೆ ‘ಮಹಾ’ರಾಷ್ಟ್ರ.
ಕೊರೋನಾ ಮಹಾಮಾರಿ ತನ್ನ ಆರ್ಭಟ ಹೆಚ್ಚಿಸಿರುವ ಮಹಾರಾಷ್ಟ್ರದಲ್ಲಿ ಬರೋಬ್ಬರಿ 41 ಸಾವಿರ ಸೋಂಕಿತರಾಗಿದ್ದು, ಅವರಲ್ಲಿ 25 ಸಾವಿರಕ್ಕೂ ಅಧಿಕ ಸೋಂಕಿತರು ಮುಂಬೈನಲ್ಲಿ ದಾಖಲಾಗಿರುವುದು ದೇಶದಲ್ಲಿ ಆತಂಕ ಸೃಷ್ಠಿಸಿದೆ.
ದೇಶದಲ್ಲಿ 1.12 ಕೊರೋನಾ ಸೋಂಕಿತರು ಪತ್ತೆಯಾಗೊದ್ದು, 45,300 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. 3,435 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ದೇಶದ ಕೊರೋನಾ ಸೋಂಕಿತರ ಕೊಡುಗೆ ನೀಡುತ್ತಿರುವ 2ನೇ ರಾಜ್ಯವಾಗಿ ತಮಿಳುನಾಡು 13 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಿದ್ದು, 94 ಮಂದಿ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1462ಕ್ಕೆ ಏರಿಕೆಯಾಗಿದ್ದು, 556 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 41 ಮಂದಿ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.