Monday, August 8, 2022

Latest Posts

ದೇಶದಲ್ಲಿನ ‘ಕೆಂಪುದೀಪ’ಗಳನ್ನು ಮುಚ್ಚಿದರೆ ಶೇ.72 ಸೋಂಕು ನಿಯಂತ್ರಣ ಸಾಧ್ಯ ಅಂತಾರೆ ಅವರು!

ವಾಷಿಂಗ್ಟನ್: ಭಾರತ ಸರ್ಕಾರವು ದೇಶದಲ್ಲಿನ ಕೆಂಪುದೀಪ ಪ್ರದೇಶಗಳನ್ನು ಅಂದರೆ ಲೈಂಗಿಕ ಕಾರ್ಯಕರ್ತರ ಪ್ರದೇಶವನ್ನು ಮುಚ್ಚಿದರೆ ಶೇ.72ರಷ್ಟು ಕೊರೋನಾ ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂಬುದಾಗಿ ಅಮೆರಿಕದ ಯಾಲೆ ವೈದ್ಯಕೀಯ ಕಾಲೇಜಿನ ಸಂಶೋಧಕರನ್ನೊಳಗೊಂಡ ಅಧ್ಯಯನ ತಂಡವೊಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ ಇದರಿಂದ ದೇಶದಲ್ಲಿ ಪ್ರಕರಣಗಳು ಗರಿಷ್ಠ ಮಟ್ಟ ಮುಟ್ಟುವುದು ಕೂಡ ಸದ್ಯದ ಲೆಕ್ಕಾಚಾರಕ್ಕಿಂತ ೧೭ ದಿನಗಳಷ್ಟು ವಿಳಂಬವಾಗಲಿದೆ ಎಂದು ತಂಡ ಹೇಳಿದೆ.ಜಪಾನ್ ಈ ಹಿಂದೆ ಅಂತಹ ಪ್ರದೇಶಗಳ ಮೇಲೆ ನಿಯಂತ್ರಣ ಹೇರದ ಕಾರಣ ಅಲ್ಲಿ ಪರಿಸ್ಥಿತಿ ಹದಗೆಟ್ಟಿತು ಎಂಬುದಾಗಿ ಯಾಲೆ ಕಾಲೇಜಿನ ಪ್ರೊ.ಜೆಫೆರಿ ಟೌನ್ಸೆಂಡ್ ಬೊಟ್ಟು ಮಾಡುತ್ತಾರೆ. ವೇಶ್ಯಾ ಗೃಹಗಳಿಗೆ ನಿತ್ಯ ೫ಲಕ್ಷ ಗ್ರಾಹಕರು ಭೇಟಿ ನೀಡುತ್ತಾರೆ ಎಂದು ತಂಡ ಅಂದಾಜಿಸಿದೆ. ಭಾರತದಲ್ಲಿ 6,37,500 ಲೈಂಗಿಕ ಕಾರ್ಯಕರ್ತೆಯರಿದ್ದು, ಇಂತಹ ಚಟುವಟಿಕೆ ಪುನಾರಂಭಕ್ಕೆ ಅವಕಾಶ ನೀಡಿದರೆ ಅಪಾಯ ಕಾದಿದೆ ಎಂದು ಎಚ್ಚರಿಸಿದೆ.
ದೇಶದ ಮುಂಬೈ, ದಿಲ್ಲಿ, ಪುಣೆ, ನಾಗಪುರ, ಕೋಲ್ಕತ ಸೇರಿದಂತೆ ಐದು ಮಹಾನಗರಗಳು ಅಪಾಯದಲ್ಲಿದ್ದು, ಈಗಿನ ನಿರ್ಬಂಧ ಮುಂದುವರಿದರೆ ಸೋಂಕಿನ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ತಲುಪಲು ಮುಂಬೈಯಲ್ಲಿ 12, ದಿಲ್ಲಿ(17), ಪುಣೆ(29), ನಾಗಪುರ(30), ಕೋಲ್ಕತಾದಲ್ಲಿ 36 ದಿನಗಳಷ್ಟು ವಿಳಂಬವಾಗಲಿದೆ ಎಂದು ಅದು ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss