ದೇಶದಲ್ಲಿ ಒಂದೇ ದಿನ 43 ಮಂದಿ ಬಲಿ: ಸೋಂಕಿತ ಸಂಖ್ಯೆ 14,378ಕ್ಕೆ ಏರಿಕೆ

0
93

ಹೊಸದಿಲ್ಲಿ: ದೇಶದಲ್ಲಿ ಕೊರೋನ ಸೋಂಕಿಗೆ ಕಳೆದ 24 ಗಂಟೆಗಳಲ್ಲಿ 43 ಮಂದಿ ಬಲಿಯಾಗಿದ್ದು, 991 ಹೊಸ ಕೊರೋನಾ ಪ್ರಕರಣ ದಾಖಲಾಗಿದೆ.
ದೇಶದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 480ಕ್ಕೆ ಏರಿಕೆಯಾಗಿದ್ದು, ಒಟ್ಟು 14,378 ಕೊರೋನಾ ಸೋಂಕಿತರ ಪ್ರಕರಣ ದಾಖಲಾಗಿದೆ. ಇವರಲ್ಲಿ 1992 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.

ದೇಶದಲ್ಲಿ ಸೋಂಕಿತರ ಅತೀ ಹೆಚ್ಚು ಪ್ರಕರಣಗಳನ್ನು ಮಹಾರಾಷ್ಟ್ರ ನೀಡಿದ್ದು, ರಾಜ್ಯ ಒಂದರಲ್ಲಿ 3300ಕ್ಕೂ ಅಧಿಕ ಸೋಂಕಿತರಿದ್ದಾರೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 1700ಕ್ಕು ಹೆಚ್ಚು ಪ್ರಕರಣ, ಮಧ್ಯಪ್ರದೇಶ 1300 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಕೊರೋನಾ ಗೆ ಈವರೆಗೂ ಬಲಿಯಾದವರ ಸಂಖ್ಯೆ 480ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಕೊರೋನಾಗೆ 359 ಬಂದಿ ಸೋಂಕಿತರಾಗಿದ್ದು, 13 ಮಂದಿ ಬಲಿಯಾಗಿದ್ದಾರೆ. ಸೋಂಕಿತರಲ್ಲಿ 88 ಮಂದಿ ಗುಣಮುಖರಾಗಿ ಹೋಂ ಕ್ವಾರಂಟೈನ್ ನಲ್ಲಿ ಇದ್ದಾರೆ

LEAVE A REPLY

Please enter your comment!
Please enter your name here