Thursday, June 30, 2022

Latest Posts

ದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ಪ್ರಕರಣ ನಡೆದಿಲ್ಲ: ಜಾವ್ಡೇಕರ್

ಪುಣೆ: ದೇಶದಲ್ಲಿ ಕಳೆದ ಆರು ವರ್ಷಗಳಲ್ಲಿ ಒಂದೇ ಒಂದು ಬಾಂಬ್ ಸ್ಫೋಟ ಪ್ರಕರಣ ನಡೆದಿಲ್ಲ. ದೇಶದ ಸುರಕ್ಷತೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡಿರುವ ಬಿಗಿ ಭದ್ರತೆಗೆ ಧನ್ಯವಾದಗಳು ಎಂದು ಶನಿವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದರು.
ಇಲ್ಲಿನ ಬಿ.ಜೆ. ಮೆಡಿಕಲ್ ಕಾಲೇಜಿನಲ್ಲಿ ಜನೌಷಧಿ ದಿವಸದ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಜಾವ್ಡೇಕರ್ ಮಾತನಾಡಿದರು.
೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮೊದಲು ಹಲವು ನಗರಗಳಲ್ಲಿ ನಿರಂತರವಾಗಿ ಬಾಂಬ್ ಸ್ಫೋಟಗಳು ಸಂಭವಿಸಿರುವುದಕ್ಕೆ ದೇಶ ಸಾಕ್ಷಿಯಾಗಿದೆ ಎಂದು ಜಾವ್ಡೇಕರ್ ಹೇಳಿದರು.
ಮೋದಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ೧೦-೧೫ ವರ್ಷಗಳ ಮುನ್ನ ಪುಣೆ, ವಡೋದರ, ಅಹ್ಮದಾಬಾದ್, ದಿಲ್ಲಿ ಮತ್ತು ಮುಂಬೈನಲ್ಲಿ ನಾವು ಸಾಕಷ್ಟು ಬಾಂಬ್ ಸ್ಫೋಟಗಳನ್ನು ಕಂಡಿದ್ದೇವೆ. ಪ್ರತಿ ಎಂಟರಿಂದ ಹತ್ತು ದಿನಗಳಿಗೆ ಸ್ಫೋಟಗಳು ಸಂಭವಿಸಿ ಜನರು ಸಾವಿಗೀಡಾಗುತ್ತಿದ್ದರು. ಇಂತಹ ಹಲವು ಘಟನೆಗಳ ಅನುಭವ ನಮ್ಮೆಲ್ಲರಿಗೂ ಆಗಿದೆ ಎಂದರು.
ಆದರೆ, ಕಳೆದ ಆರು ವರ್ಷಗಳಲ್ಲಿ ಒಂದೂ ಸ್ಫೋಟವೂ ಸಂಭವಿಸಿಲ್ಲ. ದೇಶದ ಸುರಕ್ಷತೆ ಹಾಗೂ ಭದ್ರತೆಯನ್ನು ಖಚಿತಪೊಡಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ಹಲವು ಬಿಗಿ ಕ್ರಮಗಳನ್ನು ಕೈಗೊಂಡಿರುವುದರಿಂದಲೇ ಬಾಂಬ್ ಸ್ಪೋಟದಂತಹ ಘಟನೆಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿರುವುದು ಎಂದು ಸಚಿವರು ಹೇಳಿದರು.
ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಹಲವು ಯೋಜನೆಗಳ ಕುರಿತು ಮಾತನಾಡಿದ ಜಾವ್ಡೇಕರ್,  ಬಡವರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಮಂತ್ರವನ್ನು ಪ್ರಧಾನಿ ಮೋದಿ ಅವರಿಂದ ಎರವಲು ಪಡೆಯಲಾಗಿದೆ ಎಂದರು.  ಆಯುಷ್ಮಾನ್ ಭಾರತ್ ಯೋಜನೆಂiಂi ಜನೌಷಧಿ ಕೇಂದ್ರಗಳನ್ನು ರಚಿಸುವ ಮೂಲಕ ಔಷಧಿಗಳು, ಸ್ಟಂಟ್‌ಗಳು  ಮತ್ತು ಕಸಿಯಂತಹ ಆರೋಗ್ಯ ಸೌಲಭ್ಯಗಳನ್ನು ಹಲವು ಯೋಜನೆಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮೋದಿ ಅವರಿಂದ ಒದಗಿಸಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss