Wednesday, June 29, 2022

Latest Posts

ದೇಶದಲ್ಲಿ ಕೊರೋನಾ ಲಸಿಕೆ ಹಂಚಿಕೆ ಕಾರ್ಯದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ನಡುವೆ ಪ್ರಧಾನಿ ಮೋದಿ ಲಸಿಕೆ ತಯಾರಿಕಾ ಸಂಸ್ಥೆಗಳ ಜೊತೆ ಪರಿಶೀಲನಾ ಸಭೆ ನಡೆಸಿದರು.

ಭಾರತದ ಲಸಿಕೆ ಹಂಚಿಕೆ ಕುರಿತು ಮುಂದಿನ ಮಾರ್ಗವನ್ನು ಪರಿಶೀಲಿಸಲು ಸಭೆ ನಡೆಸಲಾಗಿದ್ದು, ಲಸಿಕೆ ಅಭಿವೃದ್ಧಿಯ ಪ್ರಗತಿ, ನಿಯಂತ್ರಕ ಅನುಮೋದನೆಗಳು ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ.

ಈಗಾಗಲೇ ಸೇರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ದಿಂದ ಅತೀ ಹೆಚ್ಚು ಪ್ರಮಾಣದಲ್ಲಿ ಲಸಿಕೆ ತಯಾರು ಮಾಡಲು ನಿರ್ಧಸಿದೆ. ಮತ್ತೊಂದೆಡೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯ ಕೋಟ್ಯಾಂತರ ಲಸಿಕೆಗಳನ್ನು ತಯಾರಿಸಿದೆ ಎಂದು ಮಾಹಿತಿಯಿಂದ ತಿಳಿದುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss