ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಸ್ವದೇಶಿ ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದ್ದು, ಲಸಿಕೆಯನ್ನು ದೇಶದಲ್ಲಿ ಮೊದಲು ಯಾರು ಪಡೆದಿದ್ದಾರೆ ಎಂಬು ಕುತೂಹಲಕ್ಕೂ ತೆರೆ ಬಿದ್ದಿದೆ.
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕೋವಿಡ್ ಲಸಿಕೆಯನ್ನು ದೇಶದಲ್ಲಿ ಮೊದಲು ಸ್ಯಾನಿಟೈಸ್ ಕಾರ್ಮಿಕನಾಗಿರುವ ಮನೀಶ್ ಕುಮಾರ್ ಎಂಬುವವರಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನೀಡಲಾಗಿದೆ.
ಈ ಅವಿಸ್ಮರಣೀಯ ವೇಳೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹಾಗೂ ಇತರೆ ಅಧಿಕಾರಿಗಳು ಸಾಕ್ಷಿಯಾದರು.