ದೇಶದಲ್ಲಿ ಲಾಕ್‌ಡೌನ್ ಘೋಷಣೆ ಆಗದೇ ಇದ್ದಿದ್ದರೆ ಇಷ್ಟರಲ್ಲಿ ಸಾವಿರಾರು ಹೆಣ ಉರುಳುತಿತ್ತು!!

0
140

ಹೊಸದಿಲ್ಲಿ: ದೇಶದಲ್ಲಿ ಲಾಕ್‌ಡೌನ್ ಘೋಷಣೆ ಆಗದೇ ಇದ್ದಿದ್ದರೆ ಈ ವೇಳೆಗೆ ಕನಿಷ್ಠ 37 ರಿಂದ 78 ಸಾವಿರ ಮೃತ್ಯದವಡೆಗೆ ಸಿಲುಕುತ್ತಿದ್ದರು!
ಹೀಗೆಂದವರು ನೀತಿ ಆಯೋಗದ ಸದಸ್ಯರಾದ ವಿ.ಕೆ.ಪಾಲ್. ಮಾರ್ಚ್ 24 ರಿಂದ ದೇಶದಲ್ಲಿ ಲಾಕ್‌ಡೌನ್ ಮುಂದುವರಿದಿದ್ದು ಇದರಿಂದ ಅತಿ ದೊಡ್ಡ ಪ್ರಮಾಣದಲ್ಲಿ ಸಂಭವಿಸುತಿದ್ದಂತಹ ಸಾವು, ನೋವುಗಳಿಂದ ದೇಶ ವೀಗ ಪಾರಾಗಿದೆ ಎಂದು ಪಾಲ್ ಹೇಳಿದ್ದಾರೆ. ಕಳೆದ ಎರಡು ತಿಂಗಳಿಂದ ದೇಶದ ಉದ್ದಗಲಕ್ಕೂ ಹರಡಿದ ಕೊರೋನಾ ಸೋಂಕಿನ ಬಗ್ಗೆ ಸಾಂಖ್ಯಿಕ ಇಲಾಖೆ ಮತ್ತು ಹೆಲ್ತ್ ಫೌಂಡೇಷನ್ ಆಫ್ ಇಂಡಿಯಾ ಸಮೀಕ್ಷೆ ನಡೆಸಿ ಈ ವಿವರಗಳನ್ನು ಬಹಿರಂಗಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರೇನಾದರೂ ಲಾಕ್‌ಡೌನ್ ಘೋಷಣೆ ಮಾಡದೆ ಇದ್ದಿದ್ದರೆ ದೇಶದಲ್ಲಿ ಖಂಡಿತವಾಗಿಯೂ ಈ ವೇಳೆಗೆ ಕನಿಷ್ಠ ೩೫ ಸಾವಿರ ಮಂದಿ ಸಾವನ್ನಪ್ಪುತ್ತಿದ್ದರು ಎಂದು ಫೌಂಡೇಷನ್ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆ. ಈ ದಿಶೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಇದುವರೆಗೆ ಕೈಗೊಂಡ ಕ್ರಮಗಳು ಸಕಾರಾತ್ಮಕ ಫಲಿತಾಂಶವನ್ನು ನೀಡಿದೆ ಎಂದು ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here