Wednesday, August 10, 2022

Latest Posts

ದೇಶದಲ್ಲಿ ಶಾಲೆ ಪುನಾರಂಭಕ್ಕೆ ಯುಜಿಸಿ ಅನುಮತಿ: ನೂತನ ಮಾರ್ಗಸೂಚಿ ಬಿಡುಗಡೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಭಾರತದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಇಳಿಕೆಯಾಗುತ್ತಿದಂತೆಯೇ ಶಾಲಾ ಕಾಲೇಜು ಆರಂಭಿಸಲು ಯುಜಿಸಿ ಅನುಮತಿ ನೀಡಿದೆ. ಕೊರೋನಾ ಹರಡದಂತರ ಶಾಲಾ ಕಾಲೇಜು ಪುನರಾರಂಭಕ್ಕೆ ಯುಜಿಸಿ ಹೊಸ ಮಾರ್ಗಸೂಚಿಯನ್ನು ನೀಡಿದೆ ಎಂದು ಶಿಕ್ಷಣ ಸಚಿವ ಡಾ. ರಮೇಶ್ ಪೋಕ್ರಿಯಾಲ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಯುಜಿಸಿ ನೀಡಿದ ಮಾರ್ಗಸೂಚಿಗಳಲ್ಲಿ ಏನಿದೆ?

  • ಶಾಲೆ ಕೊಠಡಿಯಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳಿಗೆ ವಿವಿಧ ಅವಧಿಗಳಲ್ಲಿ ತರಗತಿ ನಡೆಸಬೇಕು.
  • ವಾರದಲ್ಲಿ 6 ದಿನ ತರಗತಿ ನಡೆಸಲು ಅನುಮತಿ ನೀಡಿದ್ದು, ಶಾಲೆಯಲ್ಲಿ ದೈಹಿಕ ಅಂತರ ಕಡ್ಡಾಯ ಮಾಡಬೇಕು.
  • ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಉಪಯೋಗಿಸಬೇಕು.
  • ಶಾಲಾ ಕಾಲೇಜು ಆವರಣದಲ್ಲಿ ಉಗುಳಬಾರದು.
  • ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿನ ಯಾವ ಶಾಲೆ ಹಾಗೂ ಕಾಲೇಜುಗಳನ್ನು ಪುನರಾರಂಭಗೊಳಿಸುವ ಬಗ್ಗೆ ತೀರ್ಮಾನ ಮಾಡಬೇಕು.
  • ವಿದೇಶಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಬೇಕು.
  • ಕಂಟೈನ್ ಮೆಂಟ್ ಪ್ರದೇಶದಲ್ಲಿ ಶಾಲೆ, ಕಾಲೇಜು ಪ್ರಾರಂಭಿಸಬಾರದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss