Wednesday, July 6, 2022

Latest Posts

ಲಾಕ್ ಡೌನ್ ಸಮಯದಲ್ಲಿಯೂ ಭಾರತದ ಜಿಡಿಪಿ ಬೇರೆ ದೇಶಗಳಿಗಿಂತ ಉತ್ತಮ: ಶಕ್ತಿಕಾಂತ್ ದಾಸ್

ಹೊಸದಿಲ್ಲಿ: ಕೊರೋನಾ ವೈರಸ್ ಲಾಕ್ ಡೌನ್ ಸಮಯದಲ್ಲಿಯೂ ಭಾರತದ ಜಿಡಿಪಿ ಬೇರೆ ದೇಶಗಳಿಗಿಂತ ಉತ್ತಮವಾಗಲಿದೆ ಎಂದು ಆರ್.ಬಿ.ಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದರು.
ಅವರು ಹೇಳಿದ್ದು…

  • ಶೇ.1.9ನಷ್ಟು ಜಿಡಿಪಿ ಏರಿಕೆಯಾಗಲಿರುವ ಜಿ20 ದೇಶಗಳಲ್ಲಿ ಭಾರತವು ಒಂದಾಗಿದೆ
  • ಜಾಗತಿಕ ಮಟ್ಟದ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಉತ್ತಮ ಜಿಡಿಪಿ ಕಂಡುಬರಲಿರುವ ರಾಷ್ಟ್ರಗಳಲ್ಲಿ ಭಾರತ ಕೂಡ ಇದೆ.
  • 2021-2022ರ ವೇಳೆಯಲ್ಲಿ ಭಾರತದ ಆರ್ಥಿಕತೆಯಲ್ಲಿ ಹೆಚ್ಚು ಬೆಳವಣಿಗೆ ಆಗಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ವರದಿ ತಿಳಿಸಿದೆ
  • ದೇಶದಲ್ಲಿ ಶೇ.91ರಷ್ಟು ಎಟಿಎಂ ಗಳು ಕಾರ್ಯ ನಿರ್ವಹಿಸುತ್ತಿದ್ದು, ಲಾಕ್ ಡೌನ್ ನಿಂದ ಯಾವುದೇ ಇಂಟರ್ನೆಟ್ ಬ್ಯಾಂಕಿಗ್ ಗೆ ಸಮಸ್ಯೆಯಾಗಿಲ್ಲ
  • ದೇಶದಲ್ಲಿ ಆಟೋಮೊಬೈಲ್ ಕ್ಷೇತ್ರ ಮತ್ತು ವಿದ್ಯುತ್ ಕ್ಷೇತ್ರಗಳು ತೀವ್ರವಾಗಿ ಕುಸಿತ ಕಂಡಿದೆ
  • ಡಾಲರ್ ವಿರುದ್ಧ ಭಾರತದ ರೂಪಾಯಿ 24 ಪೈಸೆ ಇಳಿದಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss