Monday, July 4, 2022

Latest Posts

ದೇಶದಲ್ಲಿ ಶೇ.38.7ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ: ವೆಂಕಯ್ಯ ನಾಯ್ಡು

ಬೆಂಗಳೂರು: ದೇಶದಲ್ಲಿ ಶೇ.38.7ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕಳವಳ ವ್ಯಕ್ತಪಡಿಸಿದ್ದಾರೆ.

ಅದಮ್ಯ ಚೇತನ ಪರಿಸರ ಸ್ನೇಹಿ ಅಡುಗೆ ಮನೆ ವೀಕ್ಷಿಸಿ ಮಾತನಾಡಿದ ಅವರು, ಯಾವುದೇ ಲಾಭದ ಆಸೆ ಇಲ್ಲದೆ ಅದಮ್ಯ ಚೇತನ ನೀಡುತ್ತಿರುವ ಈ ಸೇವೆ ಶಾಘ್ಲನೀಯವಾದುದು. ಈ ಸಂಸ್ಥೆ ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡತ್ತಿರುವುದು ಸಂತಸದಾಯವಾಗಿದೆ ಎಂದರು.

ನಾವು ಸೇವಿಸುತ್ತಿರುವ ಆಹಾರದಲ್ಲಿ ಪೌಷ್ಠಿಕಾಂಶದ ಕೊರತೆ ಇದೆ. ದೇಶದಲ್ಲಿ ಇನ್ನೂ ಶೇ.38.7ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಠಿಕತೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ. ಮುಂದಿನ ಪೀಳಿಗೆಯ ಭವಿಷ್ಯ ಹಾಳಾದರೆ ದೇಶದ ಆರ್ಥಿಕತೆಗೂ ಹೊಡೆತ ಬೀಳಲಿದೆ ಎಂದು ತಿಳಿಸಿದರು.

ದೆಹಲಿಗೆ ತೆರಳಿದಾಗ ನಾನು ಅನಂತಕುಮಾರ್ ಅವರ ನಿವಾಸದಲ್ಲಿ ಉಳಿದುಕೊಳ್ಳುತ್ತಿದೆ. ಅಲ್ಲಿ ನಾನು ಹಲವಾರು ಸಿಹಿ ತಿನಿಸುಗಳನ್ನು ಸವಿದಿರುವೆ. ಅನಂತಕುಮಾರ್ ನಮ್ಮ ಮನೆಗೆ ಬಂದಾಗ ಆಂಧ್ರ ಊಟವನ್ನು ಬಹಳ ಇಷ್ಟ ಪಡುತ್ತಿದ್ದರು. ಅನಂತಕುಮಾರ್, ಸುಷ್ಮಾ ಸ್ವರಾಜ್ ಸೇರಿದಂತೆ ಹಲವು ಸ್ನೇಹಿತರು ನಮ್ಮನ್ನು ಅಗಲಿರುವುದು ದುಃಖಕರ ಸಂಗತಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss