ದೇಶದಲ್ಲಿ ಸತತವಾಗಿ 16ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

0
72

ನವದೆಹಲಿ: ದೇಶದಲ್ಲಿ ಸತತವಾಗಿ 16ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.
ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 34 ಪೈಸೆ, ಡೀಸೆಲ್ ದರದಲ್ಲಿ 58 ಪೈಸೆ ಏರಿಕೆ ಮಾಡಲಾಗಿದ್ದು, ಸೋಮವಾರ ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 79.56ರೂ., ಡೀಸೆಲ್‌ ದರ ರೂ. 78.85 ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ರೂ. 82.15, ಡೀಸೆಲ್‌ ದರ 74.98 ರೂ. ದಾಖಲಾಗಿದೆ. ಈ ಬಗ್ಗೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್ ಮಾಹಿತಿ ನೀಡಿದ್ದು, ತೈಲ ಬೆಲೆ ಏರಿಕೆಗೆ ಜಾಗತಿಕವಾಗಿ ಕಚ್ಚಾತೈಲ ಬೆಲೆಯಲ್ಲಿ ವ್ಯತ್ಯಯ, ಡಾಲರ್-ರುಪಾಯಿ ವಿನಿಮಯ ದರದ ಆಧಾರ, ಅಬಕಾರಿ ಸುಂಕ ಹೆಚ್ಚಳ, ಆಯಾ ರಾಜ್ಯಗಳಲ್ಲಿನ ಪ್ರತ್ಯೇಕ ವ್ಯಾಟ್ ದರ ಎಲ್ಲವೂ ಕಾರಣವಾಗುತ್ತದೆ ಎಂದಿದೆ.

LEAVE A REPLY

Please enter your comment!
Please enter your name here