Saturday, July 2, 2022

Latest Posts

ದೇಶದಲ್ಲಿ ಸದ್ಯಕಂತೂ ಸಾಮಾನ್ಯ ರೈಲು ಓಡಾಟ ಡೌಟ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳದಿಂದ ಏರಲಾಗಿದ್ದ ಲಾಕ್ ಡೌನ್ ವೇಳೆ ಸ್ಥಗಿತಗೊಂಡಿದ್ದ ಸಾಮಾನ್ಯ ರೈಲು ಸೇವೆಯ ಪುನರಾರಂಭದ ಕುರಿತು ಸ್ಪಷ್ಟವಾಗಿ ಹೇಳಲು ಅಸಾಧ್ಯ ಎಂದು ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಯಾದವ್ , ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಳದಿಂದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು, ಇದರಿಂದ ಪ್ರಯಾಣಿಕರಿಂದ ಗಳಿಸುತ್ತಿದ್ದ ಆದಾಯದಲ್ಲಿ ಭಾರಿ ನಷ್ಟವುಂಟಾಗಿದೆ. ಈಗ ಸೋಂಕಿನ ಪ್ರಮಾಣ ಕಡಿಮೆವಿದ್ದರೂ ರೈಲುಗಳ ಸೇವೆಯನ್ನು ಆರಂಭದ ಕುರಿತು ನಿರ್ದಿಷ್ಟ ದಿನಾಂಕ ಹೇಳುವುದು ಅಸಾಧ್ಯ ಎಂದು ತಿಳಿಸಿದ್ದಾರೆ.
ಕೇವಲ ಶೇ 30ರಿಂದ 40ರಷ್ಟು ಮಾತ್ರ ರೈಲುಗಳು ಸೇವಾ ನೀಡುತ್ತಿದೆ. ಆದರೆ ಪೂರ್ಣಪ್ರಮಾಣದಲ್ಲಿ ಆರಂಭವಾಗಿಲ್ಲ. ಸದ್ಯ ಕೊರೋನಾ ಪ್ರಮಾಣ ಕಡಿಮೆಯಾಗುತ್ತಿದರು , ಜನರಲ್ಲಿನ ಆತಂಕ ಕಡಿಮೆಯಾಗಲಿಲ್ಲ. ಈ ನಿಟ್ಟಿನಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಹಂತ ಹಂತವಾಗಿ ಸಾಮಾನ್ಯ ರೈಲು ಸೇವೆಯನ್ನು ಪುನರಾರಂಭಿಸಲಾಗುವುದು ಎಂದು ಅವರು ಹೇಳಿದರು.
ಇನ್ನು ಭಾರತೀಯ ರೈಲ್ವೆ ಮಂಡಳಿಯ ಆದಾಯದಲ್ಲಿ ಭಾರೀ ಕುಸಿತ ಕಂಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 87ರಷ್ಟು ಕುಸಿತ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಪ್ರಯಾಣಿಕರಿಂದ4,600 ಕೋಟಿ ಆದಾಯ ಗಳಿಸಲಾಗಿದೆ. ಮಾರ್ಚ್ 2021ರ ವೇಳೆಗೆ ಈ ಆದಾಯ 15 ಸಾವಿರ ಕೋಟಿಗೆ ತಲುಪುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಗಳಿಸಿದ್ದಕ್ಕಿಂತ ಹೆಚ್ಚಿನ ಆದಾಯ ದೊರೆಯುವ ನಿರೀಕ್ಷೆ ಇದೆ. ಡಿಸೆಂಬರ್ ವೇಳೆಗಾಗಲೇ ಶೇ 97ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss