ದೇಶದಲ್ಲಿ ಸಿನೆಮ ಚಿತ್ರೀಕರಣಕ್ಕೆ ಶೀಘ್ರದಲ್ಲಿಯೇ ಹಸಿರು ನಿಶಾನೆ: ಕೇಂದ್ರ ಸಚಿವ ಕಿಶನ್ ರೆಡ್ಡಿ ಭರವಸೆ

0
75

ಹೈದ್ರಾಬಾದ್: ಸಿನೆಮ ಚಿತ್ರೀಕರಣಕ್ಕೆ ಶೀಘ್ರದಲ್ಲಿಯೇ ಹಸಿರು ನಿಶಾನೆ ತೋರಿಸಲು ಕೇಂದ್ರ ನಿರ್ಧರಿಸಿದೆ.
ಸಿನಿಮಾ ರಂಗದ ಪ್ರಮುಖರೊಂದಿಗೆ ಶನಿವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದ ಕೇಂದ್ರ ಗೃಹ ವ್ಯವಹಾರಗಳ ಸಚಿವ ಕಿಶನ್ ರೆಡ್ಡಿ, ದೇಶದಲ್ಲಿ ಸಿನೆಮಾ ಚಿತ್ರೀಕರಣ ಆರಂಭ ಸಂಬಂಧ ಕೇಂದ್ರ ಸರಕಾರ ಸಧ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಿದೆ. ಓಟಿಟಿಯಲ್ಲಿ ಬಿಡುಗಡೆಗೊಳ್ಳುವ ಸಿನೆಮಾಗಳಿಗೆ ಸೆನ್ಸಾರ್ ಕಡ್ಡಾಯಗೊಳಿಸುವ ಬಗ್ಗೆಯೂ ಪ್ರಸ್ತಾಪ ಸರಕಾರದ ಮುಂದಿದೆ ಎಂದರು. ಜಮ್ಮು ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಚಿತ್ರೀಕರಣಕ್ಕೂ ಅನುಮತಿ ನೀಡಲಾಗುವುದು ಎಂದೂ ಸಚಿವರು ಇದೇ ಸಂದರ್ಭ ಹೇಳಿದರು.

LEAVE A REPLY

Please enter your comment!
Please enter your name here