Sunday, June 26, 2022

Latest Posts

ದೇಶದಲ್ಲಿ 4,54,049 ಜನರಿಗೆ ಕೊರೋನಾ ಲಸಿಕೆ: ಆರೋಗ್ಯ ಸಚಿವಾಲಯ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಈವರೆಗೆ 4,54,049 ಜನರಿಗೆ ಕೊರೋನಾ ಲಸಿಕೆ ನೀಡಲಾಗಿದ್ದು, ಇದರ ಜೊತೆಗೆ ದೇಶದಲ್ಲಿ ಸುಮಾರು 7 ತಿಂಗಳ ಬಳಿಕ 2 ಲಕ್ಷಕ್ಕಿಂತಲೂ ಕಡಿಮೆ ಕೊರೋನಾ ಸಕ್ರಿಯ ಪ್ರಕರಣಗಳು ವರದಿಯಾಗಿದ್ದು, 140 ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸದ್ಯ ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಮಾತ್ರ 50 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಲಸಿಕೆ ಪಡೆದವರಲ್ಲಿ ಶೇ 0.18 ಜನರಿಗೆ ಮಾತ್ರ ಅಡ್ಡ ಪರಿಣಾಮಗಳಾದವು. ಅದರಲ್ಲಿ 0.002 ರಷ್ಟು ಜನರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಬಗ್ಗೆ ಯಾವುದೇ ಅನುಮಾನ ಬೇಡ, ಎರಡು ಲಸಿಕೆಗಳೂ ಸುರಕ್ಷಿತವಾಗಿವೆ. ಒಂದು ವೇಳೆ ಲಸಿಕೆಯಿಂದ ಅಡ್ಡಪರಿಣಾಮಗಳು ಉಂಟಾದರೆ ಆಸ್ಪತ್ರೆ ವೆಚ್ಚವನ್ನು ಅಧಿಕಾರಿಗಳೇ ಭರಿಸುತ್ತಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮುಖ್ಯವಾಗಿ ಲಸಿಕೆ ಬಗೆಗೆ ಜನರಿಗಿರುವ ಗೊಂದಲ ದೂರವಾಗಬೇಕು. ಆಗ ಮಾತ್ರ ನಾವು ಕೊರೋನಾ ವನ್ನು ಸೋಲಿಸಲು ಸಾಧ್ಯ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ಹೇಳಿದ್ದಾರೆ.
ದೇಶೀಯ ಲಸಿಕೆಗೆ ವಿಶ್ವವೇ ಕಾಯುತ್ತಿದೆ. ಆದರೆ, ನಮ್ಮ ನಮ್ಮವರು ವ್ಯಾಕ್ಸಿನ್ ಹಿಂಪಡೆಯಲು ಹಿಂದೇಟು ಹಾಕಿತ್ತಿದ್ದಾರೆ. ಅದರಿಂದ ನಾವು ನಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ವ್ಯಾಕ್ಸಿನ್ ಪಡೆಯಬೇಕು ಎಂದು ಮನವಿ ಮಾಡಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss