ಬಾಗಲಕೋಟೆ: ದೇಶದ್ರೋಹ ಕೆಲಸ ಮಾಡುವ ಯಾವುದೇ ಸಂಘಟನೆಯಾಗಲಿ ಅದನ್ನು ನಿಷೇಧ ಮಾಡುವ ಕೆಲಸವನ್ನು
ಸರ್ಕಾರ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಡಿಜೆ ಹಳ್ಳಿ ಹಳ್ಳಿ ಪ್ರಕರಣಕ್ಕೆ ಸಬಂಧಿಸಿದಂತೆ ಎಸ್ಡಿಪಿಐ ಸಂಘಟನೆ ಕೈವಾಡವಿದ್ದರೆ ಅದನ್ನು ನಿಷೇಧ ಮಾಡುತ್ತೇವೆ ಅದರಲ್ಲಿ ಯಾವುದೇ ಸಂಶಯಬೇಡ. ತಡವಾದರೂ ಸರ್ಕಾರ ಘಟನೆಗೆ ಯಾರು ಕಾರಣ ಎಂದು ಸಾಕ್ಷಿಗಳನ್ನು ಗಟ್ಟಿಯಾಗಿ ತೆಗೆದುಕೊಂಡು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ದೇಶದ್ರೋಹಿ ಕೆಲಸ ಮಾಡಿದವರು ತಾವು ಮಾಡಿದ್ದೇವೆ ಎಂದು ಹೇಳಲ್ಲ, ಆದರೆ ಸರ್ಕಾ ರ ಅದನ್ನು ಸಮರ್ಥವಾಗಿ ನಿಭಾಯಿಸಲಿದೆ.ತಪ್ಪು ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು. ತಾಳ್ಮೆ ಇರಲಿ ಮುಂದೆ
ಕಾದು ನೋಡಿ ಎಂದು ಹೇಳಿದರು.
ಅವಸರದ ನಿರ್ಧಾರ ರವನ್ನು ಸರ್ಕಾರ ಮಾಡುವುದಿಲ್ಲ. ಸಾಕ್ಷಿ, ಆಧಾರಗಳನ್ನು ಗಟ್ಟಿಗೊಳಿಸಿ ತಪ್ಪಿತಸ್ಥರ ವಿರುದ್ಧ ನೂರಕ್ಕೆ ನೂರರಷ್ಟು ಕ್ರಮ ಕೈಗೊಳ್ತೀವಿ. ಕೆಜಿ ಹಳ್ಳಿ ಪ್ರಕರಣಕ್ಕೆ ಬಿಜೆಪಿಯವರು ಪ್ರಚೋದನ ನೀಡಿದ್ದಾರೆ ಎಂಬ ವಿಧಾನ ಪರಿಷತ್
ಸದಸ್ಯ ಆರ್.ಬಿ.ತಿಮ್ಮಾಪುರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕಾರಜೋಳ, ಆರ್.ಬಿ. ತಿಮ್ಮಪುರಗೆ ಇನ್ನೂ ಬುದ್ದಿ ಹಲ್ಲು ಬಂದಿಲ್ಲ. ಅಂತಹವರ ಹೇಳಿಕೆಗೆ ನಾನೇನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು. ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ ಪತ್ರಿಕಾಗೋಷ್ಠಿಯಲ್ಲಿದ್ದರು.