Sunday, June 26, 2022

Latest Posts

ದೇಶದ ಅತ್ಯುತ್ತಮ ಟಾಪ್​ 10 ಪೊಲೀಸ್​ ಠಾಣೆಗಳ ಪಟ್ಟಿ ರಿಲೀಸ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

2020ನೇ ವರ್ಷದ ದೇಶದಲ್ಲಿನ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ 10 ಉತ್ತಮ ಪೊಲೀಸ್ ಠಾಣೆಗಳ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಸೇವಾ
ಮಣಿಪುರದ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆ ಮೊದಲ ಸ್ಥಾನ ಪಡೆದಿದೆ.
ಕಾರ್ಯ ಚಟುವಟಿಕೆಯನ್ನು ಉತ್ತೇಜಿಸಲು ಮತ್ತು ಆರೋಗ್ಯಕರ ಸ್ಪರ್ಧೆಯನ್ನು ತರಲು ಕೇಂದ್ರ ಗೃಹ ಸಚಿವಾಲಯವು ಪ್ರತಿವರ್ಷ ದೇಶಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುವ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡುತ್ತದೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಟಾಪ್​ 10 ಪೊಲೀಸ್​ ಠಾಣೆಗಳ ಹೆಸರು ಸೂಚಿಸುವಂತೆ ತಿಳಿಸಿದ್ದರು. ಅಂದಿನಿಂದ ಪ್ರತಿ ವರ್ಷ ಪೊಲೀಸ್ ಮಹಾನಿರ್ದೇಶಕರ ನಿರ್ದೇಶನದ ಮೇರೆಗೆ ಪೊಲೀಸ್ ಠಾಣೆಗಳನ್ನು ಆಯ್ಕೆ ಮಾಡಲಾಗುತ್ತದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2020ರ ಉತ್ತಮ ಪೊಲೀಸ್ ಠಾಣೆಗಳ 10 ಪಟ್ಟಿ

1. ಮಣಿಪುರದ ಥೌಬಲ್ ಜಿಲ್ಲೆಯ ನಾಂಗ್​ಪೋಕ್​ ಸೆಕ್ಮೈ ಪೊಲೀಸ್​ ಠಾಣೆ
2. ತಮಿಳುನಾಡಿನ ಸೇಲಂ ನಗರದ ಎಡಬ್ಲ್ಯೂಪಿಎಸ್-ಸುರಮಂಗಲಂ ಠಾಣೆ
3. ಅರುಣಾಚಲ ಪ್ರದೇಶದ ಚಾಂಗ್ಲಾಂಗ್​ನ ಖರ್ಸಾಂಗ್ ಠಾಣೆ
4. ಛತ್ತೀಸ್​ಗಢದ ಸೂರಜ್‌ಪುರದ ಭೈಯಾ ಠಾಣೆ
5. ಗೋವಾದ ಸಾಂಗುಮ್ ಠಾಣೆ
6. ಅಂಡಮಾನ್ ಮತ್ತು ನಿಕೋಬಾರ್​​ನ ಕಾಲಿಘಾಟ್ ಠಾಣೆ
7. ಸಿಕ್ಕಿಂನ ಪಾಕ್ಯಾಂಗ್ ಠಾಣೆ
8. ಉತ್ತರ ಪ್ರದೇಶದ ಮೊರಾದಾಬಾದ್​ನ ಕಾಂತ್ ಠಾಣೆ
9. ದಾದ್ರಾ ಮತ್ತು ನಗರ್​​ ಹವೇಲಿಯ ಖಾನ್ವೆಲ್ ಠಾಣೆ
10. ತೆಲಂಗಾಣ ಕರೀಂನಗರದ ಜಮ್ಮಿಕುಂಟ ಟೌನ್ ಪೊಲೀಸ್​ ಠಾಣೆ

ಕೇಂದ್ರ ಸರ್ಕಾರ ಸಚಿವಾಲಯ ಬಿಡುಗಡೆ ಮಾಡಿರೋ 10 ಉತ್ತಮ ಪೊಲೀಸ್ ಠಾಣೆಗಳ ಪಟ್ಟಿಯಲ್ಲಿ ಕರ್ನಾಟಕದ ಯಾವ ಪೊಲೀಸ್ ಠಾಣೆಯೂ ಸ್ಥಾನಗಳಿಸಿಲ್ಲ . ಆದರೆ 2018ರಲ್ಲಿ ಬಿಡುಗಡೆಯಾದ ದೇಶದ ಅತ್ಯುತ್ತಮ ಟಾಪ್​ 10 ಪೊಲೀಸ್​ ಠಾಣೆಗಳ ಪಟ್ಟಿಯಲ್ಲಿ ಕರ್ನಾಟಕದ ಧಾರವಾಡದ ಗುಡಗೇರಿ 5ನೇ ಸ್ಥಾನ ಪಡೆದಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss