ನವದೆಹಲಿ: ದೇಶದಲ್ಲಿ ಒಂದೆಡೆ ಕೋರೋನಾ ನಾಗರಿಕರನ್ನು ಕಂಗಾಲಾಗಿಸಿದ್ದಾರೆ ಇನ್ನೊಂದೆಡೆ ಏರುತ್ತಿರುವ ವಾತಾವರಣದ ಉಷ್ಣಾಂಶ ಕೆಲವೊಂದು ರಾಜ್ಯಗಳನ್ನು ಹೈರಾಣಾಗಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಪ್ರದೇಶಗಳಲ್ಲಿ ಉಷ್ಣಾಂಶ 45 ರಿಂದ 45.6 ಡಿಗ್ರಿ ಸೆಲ್ಸಿಯಸ್ ತಲುಪಿದೆ. ರಾಜಸ್ಥಾನ, ಹರ್ಯಾಣಾ ಮತ್ತು ಪಂಜಾಬ್ ರಾಜ್ಯಗಳಲ್ಲಿಯೂ ಕೂಡ ಕಾದ ಕಬ್ಬಿಣದಂತಾಗಿದ್ದು ಭಾರತೀಯ ಹವಾಮಾನ ಇಲಾಖೆ ಉತ್ತರ ಭಾರತದ ಒಟ್ಟು 5 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೇ 26 ಕ್ಕೆ ರೆಡ್ ಅಲರ್ಟ್ ಜಾರಿಗೊಳಿಸಿದೆ. ನಾಳೆ ಈ ಪ್ರದೇಶಗಳಲ್ಲಿ 47 ಡಿಗ್ರಿ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಇಂದು ಇಲಾಖೆ ಮುನ್ಸೂಚನೆ ನೀಡಿದೆ.