ಹೊಸದಿಗಂತ ಆನ್ ಲೈನ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹಮ್ ದೋ, ಹಮಾರೇ ದೋ ಹೇಳಿಕೆಗೆ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದಾರೆ.
ಬಜೆಟ್ ಕುರಿತಾದ ಚರ್ಚೆ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಅವರು, ಎನ್ ಡಿಎ ಸರ್ಕಾರ ಎಂದಿಗೂ ಆಪ್ತರಿಗಾಗಿ ಕೆಲಸ ಮಾಡೋದಿಲ್ಲ. ನಮ್ಮ ದೇಶದ ಜನರಿಗಾಗಿ ಕೆಲಸ ಮಾಡುತ್ತದೆ. ಆಪ್ತರು ಎಲ್ಲಿದ್ದಾರೆ ಎಂದರೆ ಅವರು ಆ ಪಕ್ಷದ ನರಳಿನಲ್ಲಿ ಅಡಗಿಕೊಂಡಿದ್ದಾರೆ. ಹಾಗಾಗಿ ದೇಶದ ಜನತೆ ಅವರನ್ನು ತಿರಸ್ಕರಿಸಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಟಾಂಗ್ ನೀಡಿದರು.
ಆತ್ಮ ನಿರ್ಭರತೆಯ ಉದ್ಧೇಶದಿಂದ ಸರ್ಕಾರದ ‘ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ’ ಸೇರಿದಂತೆ ಅನೇಕ ಯೋಜನೆಗಳು ದೇಶದ ಬಡ ಜನರ ಒಳಿತಿಗಾಗಿ ಮಾಡಲಾಗಿದೆ ಎಂದರು. ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಹಮ್ ದೋ, ಹಮಾರೇ ದೋ ಘೋಷಣೆ ಮಾಡಿದ್ದರು. ದೇಶವನ್ನು ನಾಲ್ಕು ಮಂದಿ ಆಳುತ್ತಿದ್ದಾರೆ ಎಂದು ಹೇಳಿದ್ದರು.