Thursday, August 18, 2022

Latest Posts

ದೇಶದ ಶ್ರೇಷ್ಠ ವಿವಿಗಳಲ್ಲಿ ಐಐಎಸ್‌ಸಿ ಬೆಂಗಳೂರು ಅಗ್ರ ಸ್ಥಾನ

ಹೊಸದಿಲ್ಲಿ: ದೇಶದ ಶಿಕ್ಷಣ ಸಂಸ್ಥೆಗಳ ಮೌಲ್ಯ ಅಳೆಯುವ ನ್ಯಾಷನಲ್‌ ಇನ್‌ಸ್ಟಿಟ್ಯೂಷನಲ್‌ ranking ಪ್ರೇಮ್‌ ವರ್ಕ್‌ (ಎನ್‌ಐಆರ್‌ಎಫ್‌) ಪಟ್ಟಿ ಬಿಡುಗಡೆ ಮಾಡಿದ್ದು, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ)ಬೆಂಗಳೂರು ದೇಶದ ಅಗ್ರ ವಿಶ್ವವಿದ್ಯಾಲಯಗಳಲ್ಲಿ ಮೊದಲ ಸ್ಥಾನ ಪಡೆದಿದೆ. ಅಷ್ಟೇ ಅಲ್ಲ, ದೇಶದ ಅಗ್ರ ಶಿಕ್ಷಣ ಸಂಸ್ಥೆಗಳಲ್ಲಿ ಐಐಎಸ್‌ಸಿ ಬೆಂಗಳೂರು ದ್ವೀತಿಯ ಸ್ಥಾನ ಪಡೆದಿದೆ.
ಐಐಎಸ್‌ಸಿ ಬೆಂಗಳೂರು ಮೊದಲ ಸ್ಥಾನ ಪಡೆದರೆ, ದಿಲ್ಲಿಯ ಜವಾಹರ ಲಾಲ್‌ ನೆಹರೂ ವಿವಿ ದ್ವಿತೀಯ ಹಾಗೂ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬಾಂಬೆ, ದಿಲ್ಲಿಯು ತೃತೀಯ ಸ್ಥಾನ ಪಡೆದಿದೆ. ಅತ್ತ ಶ್ರೇಷ್ಠ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳಲ್ಲೂ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ದ್ವಿತೀಯ ಸ್ಥಾನ ಪಡೆದಿದೆ.
ಅಷ್ಟೇ ಅಲ್ಲ, ದೇಶದ ಅಗ್ರ ಶಿಕ್ಷಣ ಸಂಸ್ಥೆಗಳ ಶ್ರೇಣಿಯಲ್ಲಿ ಐಐಟಿ ಮದ್ರಾಸ್‌ ಅಗ್ರ, ಐಐಎಸ್‌ಸಿ ಬೆಂಗಳೂರು ದ್ವಿತೀಯ, ಐಐಟಿ ದಿಲ್ಲಿ ಮೂರನೇ ಸ್ಥಾನ ಗಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!