Monday, August 8, 2022

Latest Posts

ದೇಶವಿರೋಧಿ ಚಟುವಟಿಕೆಗೆ ಆಸ್ಪದ ನೀಡಿದ ಕೇರಳ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು: ಕೇಂದ್ರ ಸಚಿವ ವಿ.ಮುರಳೀಧರನ್

ತಿರುವನಂತಪುರ: ಚಿನ್ನ ಕಳ್ಳ ಸಾಗಾಟದಂತಹ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಸ್ವಂತ ಕಚೇರಿಯನ್ನೇ ಬಿಟ್ಟುಕೊಟ್ಟ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಡೀ ದೇಶಕ್ಕೇ ದ್ರೋಹವೆಸಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಮತ್ತು ಸಂಸದೀಯ ಖಾತೆ ಸಹ ಸಚಿವ ವಿ.ಮುರಳೀಧರನ್ ಆರೋಪಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಮಾಣವಚನ ಉಲ್ಲಂಘಿಸಿದ ಪಿಣರಾಯಿ ವಿಜಯನ್ ತಕ್ಷಣ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಚಿನ್ನ ಕಳ್ಳ ಸಾಗಾಟ ಪ್ರಕರಣದ ಆರೋಪಿಗಳು ಉಗ್ರಗಾಮಿಗಳೊಂದಿಗೆ ನಂಟು ಹೊಂದಿದ್ದಾರೆಂಬ ಕುರಿತು ಕಸ್ಟಮ್ಸ್ ವಿಭಾಗದ ವರದಿಯ ಆಧಾರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಸಮಗ್ರ ತನಿಖೆ ನಡೆಸುತ್ತಿದೆ. ಕೇರಳ ಸರಕಾರದ ಅಧೀನದಲ್ಲಿರುವ ಸ್ಪೇಸ್ ಪಾರ್ಕ್ ನಲ್ಲಿ ಕೆಲಸ ನಿರ್ವಹಿಸಿದ ಚಿನ್ನ ಕಳ್ಳ ಸಾಗಾಟದ ಆರೋಪಿ ಸ್ವಪ್ನಾ ಸುರೇಶ್ ದೇಶದ ಮಾಹಿತಿ ತಂತ್ರಜ್ಞಾನದ ಬಗ್ಗೆ ಯಾರಿಗೆಲ್ಲ ತಿಳಿಸಿದ್ದಾಳೆಂಬ ಕುರಿತು ಸಂಪೂರ್ಣ ತನಿಖೆ ನಡೆಸಬೇಕು. ಕೇರಳದ ಚಿನ್ನ ಕಳ್ಳ ಸಾಗಾಟ ಪ್ರಕರಣವು ರಾಷ್ಟ್ರದ ಸುರಕ್ಷತೆಗೆ ಬಾಧಿಸುವ ವಿಷಯವಾಗಿದ್ದು , ಇದರಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿಗೆ ಸಾಧ್ಯವಿಲ್ಲ. ಆರೋಪ ಕೇಳಿಬಂದ 12 ದಿನಗಳ ಬಳಿಕ ತನ್ನ ಪ್ರಿನ್ಸಿಪಲ್ ಸೆಕ್ರೆಟರಿಯನ್ನು ಪಿಣರಾಯಿ ವಿಜಯನ್ ಹುದ್ದೆಯಿಂದ ಕೆಳಗಿಳಿಸಿದರು. ಆದರೆ ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ತನ್ನ ಕಚೇರಿ ಮೂಲಕ ಅಕ್ರಮ ನಡೆಯುತ್ತಿದ್ದರೂ ಮುಖ್ಯಮಂತ್ರಿಯ ಅರಿವಿಗೆ ಬಂದಿಲ್ಲ ಎಂಬುದು ಶುದ್ಧ ಸುಳ್ಳು ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss