Thursday, July 7, 2022

Latest Posts

ದೇಶವು ಅಭಿವೃದ್ಧಿಯಲ್ಲಿ ನಾಗಲೋಟದಲ್ಲಿ ಮುನ್ನೆಡೆಯುತ್ತಿದೆ : ಸಿ.ಸಿ.ಪಾಟೀಲ

ಗದಗ : ಇಡೀ ಜಗತ್ತಿನಲ್ಲಿ ಕೊರೋನಾ ಮಹಾಮಾರಿಯಿಂದ ಜನರು ತತ್ತರಿಸುತ್ತಿದ್ದರೆ ಪ್ರದಾನಿ ಮೋದಿ ಅವರು ದೇಶದಲ್ಲಿ ನಿಭಾಯಿಸಿದ ಜವಾಬ್ದಾರಿಯನ್ನು ಜಗತ್ತು ಮೆಚ್ಚಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೋದಿ ಅವರು ಅಧಿಕಾರದ ಎರಡನೆ ಅವದಿಯ ಮೊದಲನೆ ವರ್ಷವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರ ರದ್ದತಿ ಮಾಡಿದರೆ ರಕ್ತದೋಕುಳಿ ಜರುಗುತ್ತದೆ ಎಂದು ವಿರೋಧ ಪಕ್ಷದವರು ಹೇಳಿದ ಸಮಯದಲ್ಲಿ ಆ ಪ್ರದೇಶದಲ್ಲಿ ಪೊಲೀಸ್ ಹಾಗೂ ಸೈನಿಕರಿಂದ ಒಂದೇ ಒಂದು ಗುಂಡು ಹಾರಿಸದೆ ಶಾಂತಿ ಪಾಲನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ದಾರ್ಮಿಕ ಅಲ್ಪ ಸಂಖ್ಯಾತರ ರಕ್ಷಣೆಗಾಗಿ ಪೌರತ್ವ ತಿದ್ದುಪಡಿ ವಿದೇಯಕ ಅಂಗೀಕಾರ, ರಾಮ ಮಂದಿರ ನಿರ್ಮಾಣಕ್ಕೆ ಓಂಕಾರ, ತ್ರಿವಳಿ ತಲಾಖದಿಂದ ನರಳುತ್ತಿದ್ದ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ, ಪಾಕಿಸ್ತಾನದ ಕರ್ತಾರಪುರ ಗುರುದ್ವಾರಕ್ಕೆ ಭಾರತೀಯ ಭಕ್ತಾಧಿಗಳ ಬೇಟಿ ನೀಡಲು ಅವಕಾಶ, ಕಳೆದ 23 ವರ್ಷಗಳಿಂದ ತ್ರಿಪುರಾದಲ್ಲಿ ಹೆಚ್ಚು ಅಮಾನವೀಯವಾಗಿ ಸಂಕಷ್ಟದಲ್ಲಿದ್ದ ಬ್ರೂ ರಿಯಾಂಗ್ ಜನಾಂಗಕ್ಕೆ ರಕ್ಷಣೆ ನೀಡುವ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದರು.
ದೇಶದ ರಕ್ಷಣಾ ಕ್ಷೇತ್ರದಲ್ಲಿ ಜನರಲ್ ಬಿಪಿನ್ ರಾವತ್ ಅವರನ್ನು ಭಾರತದ ಮೊದಲ ಸೇನಾ ಮುಖ್ಯಸ್ಥರಾಗಿ ನೇಮಕ. ಭಾರತೀಯ ಸೈನ್ಯಕ್ಕೆ 8 ಅಪಾಚೆ ಹೆಲಿಕಾಪ್ಟರ್‌ಗಳ ಸೇರ್ಪಡೆ. 36 ರಾಫೆಲ್ ಏರಕ್ರಾಪ್ಟಗಳ ಪೈಕಿ ಮೊದಲ ರಾಫೇಲ್ ಏರ್‌ಕ್ರಾಪ್ಟ್ ಭಾರತದಿಂದ ಸ್ವೀಕಾರ ಮಾಡುವ ಮೂಲಕ ಮಹತ್ತರ ಸಾಧನೆ ಮಾಡಿದೆ. ಮನಮೋಹನ ಸಿಂಗ ಅವರ ಸರಕಾರದಲ್ಲಿ ಯುದ್ದ ನಡೆದಿದ್ದರೆ ವಾರಕ್ಕೆ ಬೇಕಾಗುವ ಯುದ್ದ ಸಾಮಗ್ರಿಗಳು ಮಾತ್ರ ಇದ್ದವು ಆದರೆ, ಇಂದು ಪದೇ ಪದೇ ಕಾಲು ಕೆದರಿ ಜಗಳಕ್ಕೆ ಬರುವ ಚೀನಾ ದೇಶವು ನಮಗೆ ಸರಿಸಾಟಿ ಅಲ್ಲ ಎನ್ನುವುದು ನಾವು ಸಾಬೀತು ಮಾಡಿದ್ದೆವೆ ಎಂದು ಹೇಳಿದರು.
ದೇಶದ ಜನರಿಗಾಗಿ ಆಯುಷ್ಮಾನ್ ಭಾರತ ಯೋಜನೆ ಅಡಿ ಒಂದು ಕೋಟಿಗೂ ಹೆಚ್ಚು ಫಲಾನುಭವಿಗಳು. ಅಟಲ್ ಪೆನ್ಷನ್ ಯೋಜನೆ ಅಡಿ 2.23 ಕೋಟಿ ಜನರು ನೋಂದಣಿ. ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ 16.5 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ಸಹಾಯಧನ. ಅಟಲ್ ಭೂಜಲ ಯೋಜನೆಯಡಿ 7 ರಾಜ್ಯಗಳ 8350 ಹಳ್ಳಿಗಳಿಗೆ ಪ್ರಯೋಜನವಾಗಿದೆ. 52 ಲಕ್ಷಕ್ಕೂ ಹೆಚ್ಚು ವಲಸಿಗ ಕಾರ್ಮಿಕರನ್ನು ಅವರವರ ಸ್ಥಳಗಳಿಗೆ ಕಳಿಹಿಸಲು ೩೮೪೦ಕ್ಕೂ ಹೆಚ್ಚು ಶ್ರಮಿಕ ರೈಲುಗಳನ್ನು ಬಿಡಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಅದೇರೀತಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯಾಧ್ಯಂತ ಕೊವೀಡ್-19 ಹರಡಂತೆ ರಾಜ್ಯಾಧ್ಯಂತೆ 537 ಆಸ್ಪತ್ರೆಗಳನ್ನು ಐಸೋಲೇಷನ್ ಆಸ್ಪತ್ರೆಗಳಾಗಿ ಪರಿವರ್ತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಬಿಜೆಪಿಯ ಸಂಘಟಾತ್ಮಕ 37 ಜಿಲ್ಲೆಗಳಲ್ಲಿ ನಿರಂತರ ಸೇವಾ ಕಾರ್ಯ ನಡೆಯುತ್ತಿದೆ. ರಾಜ್ಯದ 58 ಸಾವಿರ ಭೂತ, 311 ಮಂಡಳದಲ್ಲಿ 1,47,12,682 ಆಹಾರ ಪೊಟ್ಟಣ, 44,68,239 ರೇಷನ್ ಕಿಟ್‌ಗಳನ್ನು ವಿತರಿಸಲಾಗಿದೆ. ೩34.35 ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗಿದೆ ಎಂದು ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.
ಈ ಸಂದರ್ಭದಲ್ಲಿ ರೋಣ ಶಾಸಕ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀಪತಿ ಉಡುಪಿ, ವಸಂತ ಮೇಟಿ, ನಿಂಗಪ್ಪ ಮಣ್ಣೂರ ಮುಂತಾದವರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss