Tuesday, June 28, 2022

Latest Posts

ದೇಶಿಯ ವಿಮಾನಗಳ ಸಂಚಾರ ಮಿತಿ ಹೆಚ್ಚಿಸಿದ ಕೇಂದ್ರ ಸರಕಾರ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರಕಾರ ಸಿಹಿ ಸುದ್ದಿ ನೀಡಿದ್ದು, ಕೊರೋನಾ ಬಳಿಕ ದೇಶೀಯ ವಿಮಾನಗಳ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಲು ನೀಡಿದ್ದ ಅನುಮತಿಯ ಮಿತಿಯನ್ನು ಶೇ 70 ರಿಂದ 80ಕ್ಕೆ ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಕೊರೋನಾ ಸೋಂಕಿನ ನಡುವೆಯೂ ದೇಶಿಯ ಪ್ರಯಾಣಿಕ ವಿಮಾನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನವೆಂಬರ್ 11ರಂದು ಶೇ. 70 ರಷ್ಟು ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು. ಇದೀಗ ಅದನ್ನು ಶೇ. 80ಕ್ಕೆ ಹೆಚ್ಚಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಪುರಿ , ದೇಶೀಯ ಕಾರ್ಯಾಚರಣೆಗಳು ಮೇ 25ರಂದು 30 ಸಾವಿರ ಪ್ರಯಾಣಿಕರೊಂದಿಗೆ ಪುನರಾರಂಭಗೊಂಡವು. ಈಗ ನವೆಂಬರ್ 30ರ ವೇಳೆಗೆ ಗರಿಷ್ಠ 2.52 ಲಕ್ಷ ಮುಟ್ಟಿದೆ ಎಂದರು.
ವಿಮಾನಯಾನ ಸಂಸ್ಥೆಗಳು ತಮ್ಮ ಕೋವಿಡ್​ ಪೂರ್ವ ದೇಶೀಯ ವಿಮಾನಗಳಲ್ಲಿ ಶೇ 33ಕ್ಕಿಂತ ಅಧಿಕ ಆಸನಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲಾಯಿತು. ಜೂನ್ 26ರಂದು ಇದನ್ನು ಶೇ 45ಕ್ಕೆ ಮತ್ತು ಸೆಪ್ಟೆಂಬರ್ 2ರಂದು ಶೇ 60ಕ್ಕೆ ಹೆಚ್ಚಿಸಲಾಗಿತ್ತು.ಈಗಿನ ಶೇ70ರಷ್ಟು ವಿಮಾನಗಳ ಕಾರ್ಯಚರಣೆಗೆ ಶೇ 10ರಷ್ಟು ವಿಮಾನಗಳು ಸೇರ್ಪಡೆ ಆಗಲಿವೆ. ಇದರಿಂದ ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆ ಸರಳವಾಗಲಿದ್ದು, ಬಹು ದಿನಗಳವರೆಗೆ ಕಾಯುವಿಕೆ ತಪ್ಪಲಿದೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss