Tuesday, July 5, 2022

Latest Posts

ದೇಶೀಯ ಕಂಪೆನಿಗಳ ಮೇಲೆ ಹಿಡಿತ ಸಾಧಿಸುವ ಹುನ್ನಾರಕ್ಕೆ ತಡೆ: ನೆರೆ ದೇಶದ ಹೂಡಿಕೆಗೆ ಬೇಕಿನ್ನು ಸರಕಾರದ ಒಪ್ಪಿಗೆ

ಹೊಸದಿಲ್ಲಿ: ಭಾರತದೊಂದಿಗೆ ಭೂಗಡಿಯನ್ನು ಹಂಚಿಕೊಂಡ ದೇಶಗಳ ನಾಗರಿಕ ಅಥವಾ ಕಂಪೆನಿಯು ಇನ್ನು ಮುಂದೆ ಭಾರತ ಸರಕಾರದ ಅನುಮತಿ ಪಡೆದ ಬಳಿಕವೇ ದೇಶದ ಯಾವುದೇ ರಂಗದಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ನೆರೆಯ ದೇಶಗಳಲ್ಲಿನ ಹೂಡಿಕೆ ಮಾಡಬಯಸುವ ವ್ಯಕ್ತಿ ಅಥವಾ ಕಂಪೆನಿಗಳು ಭಾರತ ಸರಕಾರದ ಅನುಮತಿ ಲಭಿಸಿದ ನಂತರವೇ ಹೂಡಿಕೆ ಮಾಡಲು ಸಾಧ್ಯವೆಂದು ಉದ್ಯಮ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ತಿಳಿಸಿದೆ.ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ವಿವಿಧ ಪಾಶ್ಚಾತ್ಯ ದೇಶಗಳ ಕಂಪೆನಿಗಳ ಮೇಲೆ ಹಿಡಿತ ಸಾಸುತ್ತಿದೆ ಎಂಬ ವರದಿಗಳ ನಡುವೆಯೇ ಕೇಂದ್ರ ಸರಕಾರ ಇಂತಹ ಒಂದು ನೀತಿ ಪ್ರಕಟಿಸಿರುವುದು ಮಹತ್ವ ಪಡೆದಿದೆ.
ಇಂತಹ ನಿರ್ಧಾರವು ಚೀನಾದಂತಹ ದೇಶಗಳಿಂದ ಭಾರತದ ವಾಣಿಜ್ಯೋದ್ಯಮ ಕ್ಷೇತ್ರಗಳು ಸ್ವೀಕರಿಸುವ ವಿದೇಶಿ ಹೂಡಿಕೆಗಳ ಮೇಲೆ ಪರಿಣಾಮವನ್ನುಂಟು ಮಾಡುವ ಸಾಧ್ಯತೆಯಿದೆ. ಕೋವಿಡ್-೧೯ ಮಹಾಮಾರಿ ತೀವ್ರವಾಗಿ ವ್ಯಾಪಿಸುವ ಈ ಸಂದರ್ಭದಲ್ಲಿ ದೇಶೀ ಸಂಸ್ಥೆಗಳನ್ನು ಸ್ವಾನಪಡಿಸುವ ಅಥವಾ ಅವಕಾಶವಾದಿ ವಿದೇಶೀ ಕಂಪೆನಿಗಳ ಹಾವಳಿಯನ್ನು ನಿಗ್ರಹಿಸಲು ಕೇಂದ್ರ ಸರಕಾರ ಇಂತಹ ದಿಟ್ಟ ನಿರ್ಧಾರ ಕೈಗೊಂಡಿದೆ.
ಈವರೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ಥಾನಗಳಿಂದ ಮಾತ್ರ ವಿದೇಶೀ ಹೂಡಿಕೆ ಸ್ವೀಕರಿಸಲು ಭಾರತ ಸರಕಾರದ ಅನುಮತಿ ಕಡ್ಡಾಯವಾಗಿತ್ತು. ಅದೀಗ ವಿಸ್ತರಣೆಯಾಗಿದೆ.ಮುಖ್ಯವಾಗಿ ಭಾರತದೊಂದಿಗೆ ಭೂಗಡಿ ಹಂಚಿಕೊಂಡ ಯಾವುದೇ ನೆರೆದೇಶದ ನಾಗರಿಕನು ಅಥವಾ ಕಂಪೆನಿಯು ಭಾರತೀಯ ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ಮಾಡುವ ಯಾವುದೇ ಹೂಡಿಕೆಯು ಭಾರತ ಸರಕಾರದ ಒಪ್ಪಿಗೆ ಪಡೆದೇ ನಡೆಯಬೇಕೆಂದು ಡಿಪಿಐಐಟಿ ನೀಡಿತ ಪತ್ರಿಕಾ ಪ್ರಕಟಣೆ ತಿಳಿಸಿದೆ. ಎಫ್‌ಡಿಐ ನೀತಿಗೆ ಒಳಪಟ್ಟಂತೆ ವಿದೇಶೀ ಹೂಡಿಕೆದಾರರು ಕೋವಿಡ್-೧೯ ಮಹಾಮಾರಿ ಹಾವಳಿಯ ಕಾಲದಲ್ಲಿ ಅವಕಾಶವಾದಿಗಳಾಗದಂತೆ ತಡೆವ ನಿರ್ಬಂಧ ಕ್ರಮವಾಗಿ ಭಾರತ ಸರಕಾರ ಇಂತಹ ಮಹತ್ವದ ನಿರ್ಧಾರ ತಳೆದಿದೆ.
ಈ ಮೂಲಕ ಬಾಂಗ್ಲಾದೇಶ, ಪಾಕಿಸ್ಥಾನ, ಚೀನಾದಂತಹ ನೆರೆ ರಾಷ್ಟ್ರದ ಪ್ರಜೆ ಅಥವಾ ಕಂಪೆನಿ ಭಾರತದಲ್ಲಿ ರಕ್ಷಣೆ, ಬಾಹ್ಯಾಕಾಶ, ಅಣುಶಕ್ತಿಯಂತಹ ನಿಷೇತ ರಂಗಗಳನ್ನು ಹೊರತುಪಡಿಸಿ ಇತರ ರಂಗಗಳಲ್ಲಿ ವಿದೇಶೀ ಹೂಡಿಕೆಯನ್ನು ಭಾರತ ಸರಕಾರದ ಮೂಲಕ ಮಾತ್ರ ಹೂಡಿಕೆ ನಡೆಸಬಹುದೆಂದು ಡಿಪಿಐಐಟಿ ಪ್ರಕಟಣೆ ವಿವರಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಂಗಿಯಾ ಆಂಡರ್‌ಸೇನ್ ಎಲ್‌ಎಲ್‌ಪಿ ನಿರ್ದೇಶಕ ಸಂದೀಪ್ ಝುಂಝುನ್‌ವಾಲಾ, ಭಾರತ-ಚೀನಾ ಆರ್ಥಿಕ ಮತ್ತು ಸಾಂಸ್ಕೃತಿಕ ಮಂಡಳಿ ಅಂದಾಜಿನಂತೆ ಚೀನಾದ ಟೆಕ್ ಹೂಡಿಕೆದಾರರು ಸುಮಾರು ೪೦೦ ಕೋಟಿ ಡಾಲರ್ ಬಂಡವಾಳವನ್ನು ಭಾರತೀಯ ಸ್ಟಾರ್ಟ್ ಅಪ್ಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ವಿದೇಶಿ ಟೆಕ್ ಕಂಪೆನಿಗಳು ಭಾರತೀಯ ಟೆಕ್ ಕಂಪೆನಿಗಳ ಸಹಜ ವ್ಯವಹಾರದ ಮೇಲೆ ಪ್ರತಿಕೂಲದಾಯಕ ಪೈಪೋಟಿಗಿಳಿಯದಂತೆ ನಿಬಂಂಸುವ ಭಾರತ ಸರಕಾರದ ಈ ನಿರ್ಧಾರ ಸಮಂಜಸ ಹಾಗೂ ರಕ್ಷಣಾತ್ಮಕವೆಂದು ಹೇಳಿದ್ದಾರೆ.
೨೦೦೦ ಏಪ್ರಿಲ್ ಮತ್ತು ಡಿಸೆಂಬರ್ ೨೦೧೯ ನಡುವೆ ಚೀನಾದಿಂದ ೨೩೪ ಕೋಟಿ ಡಾಲರ್ (೧೪,೮೪೬ ಕೋ. ರೂ.) ಮೌಲ್ಯದ ಎಫ್‌ಡಿಐಯನ್ನು ಭಾರತ ಪಡೆದಿದೆ. ಭಾರತದೊಂದಿಗೆ ಭೂಗಡಿಯನ್ನು ಹಂಚಿಕೊಂಡ ನೆರೆದೇಶಗಳು: ಚೀನಾ, ಬಾಂಗ್ಲಾದೇಶ, ಪಾಕಿಸ್ಥಾನ, ಭೂತಾನ್, ನೇಪಾಳ ಮತ್ತು ಮ್ಯಾನ್ಮಾರ್‌ಗಳಾಗಿದ್ದು, ಕೊರೋನಾ ಪಿಡುಗಿನಿಂದ ಜಗತ್ತು ಭಾರೀ ಆರ್ಥಿಕ ಕುಸಿತಕ್ಕೆ ಈಡಾಗಿರುವಾಗಲೇ ಚೀನೀ ಕಂಪೆನಿಗಳು ಹಲವು ಪಶ್ಚಿಮ ದೇಶಗಳ ಕಂಪೆನಿಗಳ ಕುಸಿದ ಶೇರುಗಳನ್ನು ಖರೀದಿಸಿ ಅವುಗಳ ಮೇಲೆ ಹಿಡಿತ ಸಾಸಲು ಯತ್ನಿಸಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಭಾರತ ಸರಕಾರದ ಈ ಕ್ರಮ ಗಮನ ಸೆಳೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss