spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಶೀಯ ಜನತೆಗೆ ಗುಡ್ ನ್ಯೂಸ್: ಭಾರತದಲ್ಲಿ ಕೋವಿಡ್-19 ಲಸಿಕೆಯ ಮೂರನೇ ಹಂತದ ಪ್ರಯೋಗ ಪ್ರಾರಂಭ

- Advertisement -Nitte

ನವದೆಹಲಿ: ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಹಂತ ಹಂತವಾಗಿ ಭಾರತ ಮುನ್ನೆಡೆ ಸಾಗುತ್ತಿವೆ. ಈ ಕಾರ್ಯದಲ್ಲಿ ಪ್ರಮುಖ ಬೆಳವಣಿಗೆ ನಡೆದಿದ್ದು, ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಸಂಭಾವ್ಯ ಕೋವಿಡ್-19 ಲಸಿಕೆ ಭಾರತದಲ್ಲಿ ಮೂರನೇ ಹಂತದ ಪ್ರಯೋಗ ಪ್ರಾರಂಭಿಸಲು ಸಿದ್ಧತೆ ನಡೆದಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್ ತಿಳಿಸಿದ್ದಾರೆ.
ಸಂಭಾವ್ಯ ಕೋವಿಡ್-19 ಲಸಿಕೆ ಹೆಸರು ಮತ್ತು ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
ತನ್ನ ಮೂರನೇ ಹಂತದ ಪ್ರಯೋಗವನ್ನು ನಾಳೆ ನಡೆಸುವ ನಿರೀಕ್ಷೆ ಇದೆ. ಭಾರತದಲ್ಲೇ ತಯಾರಾಗುತ್ತಿರುವ ಸ್ವದೇಶಿ ಲಸಿಕೆಯೊಂದರ ಮೂರನೇ ಹಂತದ ಪ್ರಯೋಗ ಪ್ರಾರಂಭಗೊಳ್ಳುತ್ತಿರುವುದು ದೇಶದ ಜನರಿಗೆ ಹಾಗೂ ಇಲ್ಲಿನ ಆರೋಗ್ಯ ವ್ಯವಸ್ಥೆಗೆ ಒಂದು ಹೊಸ ಭರವಸೆಯನ್ನೇ ನೀಡಿದಂತಾಗಿದೆ ಎಂದು ವಿ.ಕೆ. ಪಾಲ್ ತಿಳಿಸಿದ್ದಾರೆ.
ಭಾರತದಲ್ಲಿ ಪ್ರಮುಖವಾಗಿ ಕೊವ್ಯಾಕ್ಸಿನ್ ಮತ್ತು ಜೈಕೋವ್ -ಡಿ ಲಸಿಕೆಗಳನ್ನು ಮಾನವ ಪ್ರಯೋಗಗಳಿಗೆ ಒಳಪಡಿಸಲಾಗಿದೆ.
ಈ ಕುರಿತಾಗಿ ಪ್ರಧಾನಮಂತ್ರಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನರೇಂದ್ರ ಮೋದಿ ಅವರು ಮಾಹಿತಿ ನೀಡಿದ್ದರು ಮತ್ತು ದೇಶದಲ್ಲಿ ಮೂರು ವ್ಯಾಕ್ಸಿನ್ ಗಳು ತಮ್ಮ ಪ್ರಯೋಗದ ವಿವಿಧ ಹಂತಗಳಲ್ಲಿವೆ ಎಂದು ಅವರು ಹೇಳಿದ್ದರು.
ಇವುಗಳಲ್ಲಿ ಒಂದು ವ್ಯಾಕ್ಸಿನ್ ಬುಧವಾರದಂದು ಮೂರನೇ ಹಂತದ ಪ್ರಯೋಗಕ್ಕೆ ತೆರೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನುಳಿದ ಎರಡು ಲಸಿಕೆಗಳು ಕ್ರಮವಾಗಿ ಒಂದನೇ ಹಂತ ಮತ್ತು ಎರಡನೇ ಹಂತದ ಪ್ರಯೋಗಗಳಲ್ಲಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss