Monday, July 4, 2022

Latest Posts

ದೇಶೀಯ ವಿಮಾನ ಪ್ರಯಾಣ ದರದಲ್ಲಿ ಏರಿಕೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ನಾಗರಿಕ ವಿಮಾನಯಾನ ಸಚಿವಾಲಯ ದೇಶೀಯ ವಿಮಾನಗಳ ಮೇಲಿನ ಮಿತಿಗಳನ್ನು ಶೇಕಡಾ 10 ರಿಂದ ಶೇಕಡಾ 30ರಷ್ಟು ಹೆಚ್ಚಿಸಿದೆ. ಈ ಮೂಲಕ ಭಾರತದಲ್ಲಿ ವಿಮಾನಗಳ ಟಿಕೆಟ್‌ ದರವು ಏರಿಕೆಯಾಗಲಿವೆ.
ನಾಗರಿಕ ವಿಮಾನಯಾನ ಸಚಿವಾಲಯವು ಮಾರ್ಚ್ 31 ರವರೆಗೆ ವಿಮಾನ ದರವನ್ನು ವಿಸ್ತರಿಸಿದೆ. ಕೋವಿಡ್-19 ಸಾಂಕ್ರಾಮಿಕದಿಂದಾಗಿ 2020 ರ ಮೇ ತಿಂಗಳಲ್ಲಿ ದೇಶೀಯ ವಿಮಾನಯಾನಕ್ಕೆ ನಿರ್ಬಂಧವನ್ನು ಜಾರಿಗೆ ತಂದಿತು.
40 ನಿಮಿಷಕ್ಕಿಂತ ಕಡಿಮೆ ಇರುವ ನಗರಗಳ ನಡುವಿನ ವಿಮಾನಗಳನ್ನು ವಿಭಾಗ 1 ರ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, 40-60 ನಿಮಿಷಕ್ಕಿಂತ ಕಡಿಮೆ ಇರುವವರನ್ನು ವಿಭಾಗ ಎರಡರ ಅಡಿಯಲ್ಲಿದೆ. 60-90 ನಿಮಿಷಗಳ ಅಂತರದಲ್ಲಿ ಮೂರನೇ ವಿಭಾಗವಿದ್ದು , ನಾಲ್ಕನೇ ವಿಭಾಗವು 90-120 ನಿಮಿಷಗಳ ಅಂತರದಲ್ಲಿ ನಗರಗಳನ್ನು ಒಳಗೊಂಡಿದೆ, ಐದನೇ ವಿಭಾಗವು 120-150 ನಿಮಿಷಗಳ ಅಂತರದಲ್ಲಿ ನಗರಗಳನ್ನು ಒಳಗೊಂಡಿದೆ. 150-180 ನಿಮಿಷಗಳು ಮತ್ತು 180-210 ನಿಮಿಷಗಳ ನಡುವಿನ ನಗರಗಳ ಪ್ರಯಾಣವು ಕ್ರಮವಾಗಿ 6 ಮತ್ತು 7 ವಿಭಾಗಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.
ಈ ಬ್ಯಾಂಡ್‌ಗಳಿಗೆ ಸಚಿವಾಲಯ ನಿಗದಿಪಡಿಸಿದ ಹೊಸ ಮಿತಿಗಳು ಹೀಗಿವೆ:2,800 ರಿಂದ 9,800 ರೂ, 3,300 ರಿಂದ 11,700 ರೂ, 3,900 ರಿಂದ 13,000 ರೂ, 5,000 ರಿಂದ 16,900 ರೂ, 6,100 ರಿಂದ 20,400 ರೂ, 7,200 ರಿಂದ 24,200 ರೂ.
ಭಾರತೀಯ ವಿಮಾನಯಾನ ಸಂಸ್ಥೆಗಳು ಕಾರ್ಯಾಚರಣೆ ನಡೆಸಲು ಅನುಮತಿ ನೀಡಿದ ದೇಶೀಯ ವಿಮಾನಗಳು ಮಾರ್ಚ್ 31ರವರೆಗೆ ಶೇಕಡ 80% ಭರ್ತಿಗೆ ಮಾತ್ರ ಅವಕಾಶ ಇರುತ್ತೆ ಎಂದು ಸಚಿವಾಲಯ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss