ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇಹ ದಣಿದಿದ್ದರೂ ನಿದ್ದೆ ಬರುತ್ತಿಲ್ಲವಾ? ನಿಮಗೆ Sleeping disorder ಇದೆಯಾ? ಅದರ ಲಕ್ಷಣಗಳಿವು..

ಕೆಲವರಿಗೆ ಜೀವನದಲ್ಲಿ ನಿದ್ದೆಗೆಡಿಸುವ ಯಾವ ಟೆನ್ಶನ್ ಕೂಡ ಇರುವುದಿಲ್ಲ. ಆದರೂ ನಿದ್ದೆ ಬರುವುದಿಲ್ಲ. ರಾತ್ರಿ ಫೋನ್ ಅಥವಾ ಬುಕ್‌ನಲ್ಲಿ ಇರುತ್ತಾರೆ. ಇನ್ನು ಒತ್ತಾಯರ್ಪೂಕವಾಗಿ ನಿದ್ದೆ ಮಾಡಲು ಯತ್ನಿಸಿದರೆ ಹಾಗೆ ಮಂಚದ ಮೇಲೆ ಮಲಗುತ್ತೀರಿ. ಆದರೆ ನಿದ್ದೆ ಬರುವುದಿಲ್ಲ. ಹೀಗೆಲ್ಲಾ ನಿಮಗೂ ಆದರೆ ಪ್ರಾಯಶಃ ನಿಮಗೆ ಸ್ಲೀಪ್ ಡಿಸಾರ್ಡರ್ ಇರಬಹುದು.
ಸ್ಲೀಪ್ ಡಿಸಾರ್ಡರ್ ಅಥವಾ ಇನ್ಸೋಮ್ನಿಯಾ ಎಂದರೇನು?
ದೇಹ ದಣಿದಿದ್ದರೂ ನಿದ್ದೆ ಬಾರದ ಸ್ಥಿತಿಯನ್ನ ಸ್ಲೀಪ್ ಡಿಸಾರ್ಡರ್ ಎನ್ನುತ್ತಾರೆ. ಇದು ಶಾಶ್ವತ ಸಮಸ್ಯೆ ಅಲ್ಲ. ಕೆಲವೊಬ್ಬರಿಗೆ ಆರು ತಿಂಗಳು ಹೀಗೆ ಆದರೆ, ಇನ್ನು ಹಲವರಿಗೆ ಎರಡು ವರ್ಷ ಇದೇ ಸಮಸ್ಯೆ ಆಗಬಹುದು.
ಇನ್ಸೋಮ್ನಿಯಾ ಏಕೆ ಬರುತ್ತದೆ?

 • ದೊಡ್ಡ ಸ್ಟ್ರೆಸ್, ಜೀವನದ ಅತಿ ದೊಡ್ಡ ಸಮಸ್ಯೆ ನಿಮ್ಮ ಮದುವೆ,ಕೆಲಸ,ತಂದೆ ತಾಯಿ ಆರೋಗ್ಯ, ಆರ್ಥಿಕ ಸಮಸ್ಯೆ. ಇವು ಒಂದು ದಿನದ ಸಮಸ್ಯೆಯಲ್ಲ. ಪ್ರತಿ ದಿನ ಇದರ ಬಗ್ಗೆ ಚಿಂತೆ ಮಾಡದಿದ್ದರೂ, ಮನದಾಳದಲ್ಲಿ ಯಾವಾಗಲೂ ಇದೇ ಚಿಂತೆ ಇರುತ್ತದೆ.
 • ಜಾಗಬದಲಾವಣೆ ಮಾಡಿದಾಗಲೂ ಹೀಗಾಗುತ್ತದೆ. ಬೇರೆ ಊರು, ಏರಿಯಾ ಮನೆ, ರೂಮ್, ರೂಮಿನಲ್ಲೇ ಮಂಚದ ಜಾಗ ಅದಲು ಬದಲು ಮಾಡಿದರೆ ಹೀಗೆ ಈ ರೀತಿ ಮಾಡಿದಾಗ ನಿದ್ದೆ ಬರುವುದಿಲ್ಲ. ಅದು ರೂಡಿಯಾಗುತ್ತದೆ.
 • ಶಿಫ್ಟ್ ಸಮಸ್ಯೆಯಿದ್ದರೂ ಹೀಗಾಗುತ್ತದೆ.ಕೆಲವರಿಗೆ ವಾರದ ಮೂರು ದಿನ ನೈಟ್ ಶಿಫ್ಟ್ ಇನ್ನ ಉಳಿದ ದಿನ ಡೇಶಿಫ್ಟ್, ರಾತ್ರಿ ಮಲಗುವುದಕ್ಕೆ ಅಭ್ಯಾಸ ಆಗುತ್ತಿದ್ದಂತೆ ಡ್ಯೂಟಿಗೆ ಕರೆಯುತ್ತಾರೆ. ಆಗ ಹಗಲು ನಿದ್ದೆ ಮಾಡಬೇಕಾಗುತ್ತದೆ ಈ ಸಮಸ್ಯೆಯಿಮದಲೂ ನಿಮಗೆ ಸ್ಲೀಪ್ ಡಿಸಾರ್ಡರ್ ಆಗಬಹುದು.
  ಇನ್ಸೋಮ್ನಿಯಾ ಬಂದರೆ ಏನಾಗುತ್ತದೆ?
 • ದೀರ್ಘ ಕಾಲ ಅನಾರೋಗ್ಯ
 • ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
 • ತೂಕ ಹೆಚ್ಚಳ
 • ಯಾವಾಗಲೂ ಸುಸ್ತು
 • ಎಲ್ಲದಕ್ಕೂ ಕಿರಿಕಿರಿ ಮೂಡ್ ಸ್ವಿಂಗ್ಸ್
 • ನೆನಪಿನ ಶಕ್ತಿ ಕಡಿಮೆ
  ಇನ್ಸೋಮನಿಯಾದಿಂದ ಹೀಗೆ ದೂರ ಇರಿ
 • ಪ್ರತಿ ದಿನ ಪ್ರತಿ ಸಮಯಕ್ಕೆ ನಿದ್ದೆ ಮಾಡಿ. ಪ್ರತಿದಿನ ಒಂದೇ ಸಮಯಕ್ಕೆ ಎದ್ದೇಳಿ. ಇದು ರೂಡಿಯಾಗಲಿ.
 • ಮಧ್ಯಾಹ್ನದ ನಿದ್ದೆ ಬೇಡ. ಇದರಿಂದ ರಾತ್ರಿ ನಿದ್ದೆಗೆ ತೊಂದರೆಯಾಗುತ್ತದೆ.
 • ಮೊಬೈಲ್ ಬಳಕೆ ಬೇಡವೇ ಬೇಡ. ಇದು ನಿಮ್ಮ ನಿದ್ದೆ ಕಸಿಯುತ್ತದೆ. ರಾತ್ರಿ ಬೆಡ್‌ಗೆ ಹೋಗುವಾದ ಮೊಬೈಲ್ ರೂಮಿನಿಂದ ಹೊರಗಿರಲಿ.
 • ಮದ್ಯಪಾನ,ಧೂಮಪಾನ, ಕಾಫಿ ಸೇವನೆ ಇವುಗಳು ನಿಮ್ಮ ನಿದ್ದೆಯ ಮೇಲೆ ಕಣ್ಣಿಡುತ್ತದವೆ. ಹಾಗಾಗಿ ಮೊದಲು ಇವನ್ನು ನಿಲ್ಲಸಿ.
 • ಹೆವಿ ಆಹಾರ ಸೇವನೆ ಮಾಡಬೇಡಿ. ರಾತ್ರಿ ನೀವು ತಿನ್ನುವ ಆಹಾರ ಲೈಟ್ ಆಗಿರಲಿ. ಕಮ್ಮಿ ತಿಂದರೆ ಹೆಲ್ತಿಯಾಗಿರುತ್ತೀರಿ, ಒಳ್ಳೆ ನಿದ್ದೆ ಮಾಡುತ್ತೀರಿ

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss