ನ್ಯೂಯಾರ್ಕ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಈಗ ಪರಮಾಣು ಪರೀಕ್ಷೆಗೆ ಸಜ್ಜಾಗಿರುವರೇ?
ನ್ಯೂಯಾರ್ಕ್ ಟ್ಯೈಮ್ಸ್ ಪ್ರಕಾರ, ಕಿಮ್ ಕೆಲ ದಿನಗಳಿಂದ ಈ ಕಾರ್ಯದಲ್ಲಿ ಗಂಭೀರವಾಗಿ ತೊಡಗಿದ್ದಾರೆನ್ನಲಾಗಿದೆ. ಎರಡು ವಾರಗಳ ಹಿಂದೆಯಷ್ಟೆ ಅಮೆರಿಕ ಪರಮಾಣು ಪರೀಕ್ಷೆಗೆ ಸನ್ನಾಹ ನಡೆಸಿದೆ ಎಂಬ ಸುದ್ದಿ ನ್ಯೂಯಾರ್ಕ್ ಟ್ಯೈಮ್ಸ್ನಲ್ಲಿ ಪ್ರಕಟವಾದ ಬೆನ್ನ ಹಿಂದೆಯೇ ಕೊರಿಯಾ ಅಧ್ಯಕ್ಷರು ಎಚ್ಚೆತ್ತುಕೊಂಡಿದದಾರೆನ್ನಲಾಗಿದೆ. ಚೀನಾ ಹಾಗೂ ರಷ್ಯಾ ದೇಶಗಳನ್ನು ಜಾಗತಿಕ ಎದುರಿಸಲು ಅಮೆರಿಕ ರಣತಂತ್ರ ರೂಪಿಸುತ್ತಿರುವ ಸುಳಿವು ಪಡೆದ ಕಿಮ್ ಈಗ ಅತಿ ರಹಸ್ಯಮಯವಾಗಿ ಪರಮಾಣು ಪರೀಕ್ಷೆಗೆ ಮುಂದಾಗಿದ್ದರೆನ್ನಲಾಗಿದೆ. ಒಂದಷ್ಟು ದಿನಗಳ ಕಾಲ ಯಾರ ಕಣ್ಣಿಗೂ ಬೀಳದೆ ನಿಗೂಢ ತಾಣಕ್ಕೆ ತೆರಳಿದ್ದ ಕಿಮ್, ತಮ್ಮ ಚಲನವಲನಗಳ ಬಗ್ಗೆ ಯಾರಿಗೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಒಂದು ವಾರದ ಹಿಂದೆಯಷ್ಟೆ ಸ್ವಸ್ಥಳಕ್ಕೆ ವಾಪಸ್ ಆದ ಮೇಲೆ ಕೊರಿಯಾ ಅಧ್ಯಕ್ಷರು ಮಿಲಿಟರಿ ಅಧಿಕಾರಿಗಳ ಜೊತೆ ನಿರಂತರ ಚರ್ಚೆ ನಡೆಸಿದ್ದಾರೆ. ದಕ್ಷಿಣ ಕೊರಿಯಾ ಮೂಲಕ ಅಮೆರಿಕ ತನ್ನ ಶಕ್ತಿ ಹಾಗೂ ಪ್ರಾಬಲ್ಯವನ್ನು ಇಡೀ ಜಗತ್ತಿಗೆ ಸಾರಲು ಕೆಂಪುಸಮುದ್ರದ ಬಳಿ ಮಿಲಿಟರಿ ಕಾರ್ಯಾಚರಣೆ ನಡೆಸಿದೆ. ಇದೇ ವೇಳೆ ಚೀನಾ ಕೂಡಾ ಇದಕ್ಕೆ ಪ್ರತಿಯಾಗಿ ಸೈನ್ಯವನ್ನು ಜಮಾಯಿಸಿ ತಿರುಗೇಟಿಗೆ ಸಂಸಿದ್ಧವಾಗಿದೆ.
ಅಜ್ಞಾತ ಸ್ಥಳದಿಂದ ವಾಪಸ್ ಆದ ಮೇಲೆ ಕೊರೋನಾ ವಿಷಯದಲ್ಲಿ ಚೀನಾ ಸಮರ್ಥವಾಗಿ ಕೆಲಸ ಮಾಡುತ್ತಿದೆ ಎಂದು ಕಿಮ್, ಚೀನಾ ಅಧ್ಯಕ್ಷ ಜೆನ್ ಪಿಂಗ್ ಅವರನ್ನು ಮುಕ್ತಕಂಠದಿಂದ ಹೊಗಳಿದ್ದರು.