ಹಿತ್ತಲ ಗಿಡ ಮದ್ದಲ್ಲ ಎಂಬ ಹಿರಿಯರ ಮಾತು ನೂರಕ್ಕೆ ನೂರು ನಿಜ. ಏಕೆಂದರೆ ನಮ್ಮ ಹಿತ್ತಲಲ್ಲಿ ಬೆಳೆದಿರುವ ಗಿಡಗಳಿಂದಲೇ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಔಷಧಿಗಳನ್ನು ತಯಾರಿಸಿಕೊಳ್ಳಬಹುದು. ಈ ದೊಡ್ಡ ಪತ್ರೆ ಕೇವಲ ಹಳ್ಳಿಮನೆಗಳಲ್ಲಿ ಮಾತ್ರವಲ್ಲ ಪೇಟೆಮನೆಗಳಲ್ಲಿಯೂ ಸಾಮಾನ್ಯವಾಗಿ ಇರುವಂತದ್ದು. ಕುಂಡಗಳಲ್ಲಿ ಬೇಲೆದುಕೊಂಡಿರುತ್ತಾರೆ. ಇದನ್ನು ಸಂಬಾರ್ ಸೊಪ್ಪು ಎಂದೂ ಕೂಡ ಕರೆಯುತ್ತಾರೆ. ಇದರಿಂದ ಏನೆಲ್ಲ ಉಪಯೋಗವಿದೆ ಎಂದು ನಿಮಗೆ ಗೊತ್ತಿದೆಯೇ.
- ದೊಡ್ಡಪತ್ರೆ ಎಲೆಯನ್ನು ಜಜ್ಜಿ ಅದರ ರಸವನ್ನು ತೆಗೆದು ಅದಕ್ಕೆ ಬೆಲ್ಲವನ್ನು ಸೇರಿಸಿಕೊಂಡು ನಿತ್ಯ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಪಿತ್ತ ಕಡಿಮೆ ಆಗುತ್ತದೆ.
- ಜ್ವರ ಬಂದಾಗ ದೊಡ್ಡ ಪತ್ರೆ ಎಲೆಯನ್ನು ಬಾಡಿಸಿ ಅದನ್ನು ನೆತ್ತಿಯ ಮೇಲೆ ಇಟ್ಟುಕೊಂಡರೆ ಜ್ವರ ಕಡಿಮೆ ಆಗುತ್ತದೆ.
ಕೆಮ್ಮು, ಕಫ ಹೆಚ್ಚು ಇದ್ದಾಗ ದೊಡ್ಡ ಪತ್ರೆ ಎಲೆಯ ರಸವನ್ನು ತೆಗೆದು ಅದಕ್ಕೆ ಜೇನು ತುಪ್ಪ ಮತ್ತು ಶುಂಠಿ ರಸವನ್ನು ತೆಗೆದು ಕೊಂಡು ಇವು ಮೂರನ್ನು ಸೇರಿಸಿಕೊಂಡು ಕುಡಿಯಬೇಕು. ಇದರಿಂದ ಬೇಗ ಕೆಮ್ಮು, ಕಫ ಕಡಿಮೆ ಆಗುತ್ತದೆ. - ದೊಡ್ಡಪತ್ರೆ ಎಲೆಯನ್ನು ಹಸಿದ ಹೊಟ್ಟೆಯಲ್ಲಿ ನಿತ್ಯ ಸೇವಿಸಿದರೆ ಕಾಮಾಲೇ ರೋಗ ಬರದಂತೆ ತಡೆಯುತ್ತದೆ. ನಿತ್ಯ ಒಂದು ಎಲೆ ಸೇವಿಸುವುದು ಒಳ್ಳೆಯದು.
- ದೊಡ್ಡ ಪತ್ರೆ ಎಲೆನ್ನು ಶುಂಠಿ ಮತ್ತು ಉಪ್ಪಿನ ಜೊತೆ ಸೇರಿಸಿಕೊಂಡು ಊಟದ ನಂತರ ಸೇವಿಸಿದರೆ ಜೀರ್ಣಶಕ್ತಿ ಸರಿಯಾಗಿ ಆಗುತ್ತದೆ.
- ಅರೆ ತಲೆನೋವು, ತಲೆಶೂಲವಿದ್ದರೆ ದೊಡ್ಡಪತ್ರೆ ಎಲೆಗೆ ಅಕ್ಕಿ, ಜೀರಿಗೆ ಸೇರಿಸಿಕೊಂಡು ಅವುಗಳನ್ನು ಜಜ್ಜಿ ನೆತ್ತಿಯ ಮೇಲೆ ಇಟ್ಟುಕೊಂಡರೆ ತಲೆನೋವು ತೆಲೆ ಶೂಲ ಕಡಿಮೆ ಆಗುತ್ತದೆ.
- ಬಾಯಿ ವಾಸನೆ ಬರುತ್ತಿದ್ದರೆ ಇದರನ್ನು ಜಗಿದು ತಿನ್ನುವುದರಿಂದ ದುರ್ನಾತ ಕಡಿಮೆ ಆಗುತ್ತದೆ.
- ಚಿಕ್ಕ ಮಕ್ಕಳಿಗೆ ನೆಗಡಿ ಆದಾಗ ದೊಡ್ಡಪತ್ರೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಅದರ ಎಸವನ್ನು ತೆಗೆದು ಮಕ್ಕಳ ನೆತ್ತಿಯ ಮೇಲೆ ಹಾಕಿದರೆ ನೆಗಡಿ ಕಡಿಮೆ ಆಗುತ್ತದೆ.