Thursday, August 18, 2022

Latest Posts

ದೊಡ್ಡ ಯುದ್ಧಗಳನ್ನು ಗೆದ್ದಿರುವ ಬಿಜೆಪಿಗೆ ಉಪಚುನಾವಣೆ ಒಂದು ಸಣ್ಣ ಪರೀಕ್ಷೆ: ಬಿಜೆಪಿ ಯಾವುದೇ ಚುನಾವಣೆಗಳನ್ನು ಹಗುರವಾಗಿ ಸ್ವೀಕರಿಸಿಲ್ಲ: ಸಿ.ಟಿ.ರವಿ

ಬೆಂಗಳೂರು: ಬಿಜೆಪಿ ಸರ್ಕಾರ ಕಳೆದ ವರ್ಷ ದೊಡ್ಡ ಯುದ್ಧವನ್ನು ಗೆದ್ದಿದ್ದು, ಉಪಚುನಾವಣೆ ಸರ್ಕಾರಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಯಾವುದೇ ಚುನಾವಣೆಯನ್ನು ಹಗುರವಾಗಿ ಸ್ವೀಕರಿಸಿಲ್ಲ. ಪ್ರತಿ ಚುನಾವಣೆಯು ನಮಗೆ ಸವಾಲಾಗಿದೆ. ಉಪಚುನಾವಣೆಗೆ ಹಲವು ಆಕಾಂಕ್ಷಿಗಳಿದ್ದಾರೆ. ರಾಜ್ಯ ಕೋರ್ ಕಮಿಟಿಯು ಅಭ್ಯರ್ಥಿಗಳ ಪಟ್ಇ ಮಾಡಿ ಸಂಸದೀಯ ಸಮಿತಿಗೆ ಕಳುಹಿಸಲಿದ್ದು,ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಸಂಸದೀಯ ಸಮಿತಿ ನಿರ್ಧರಿಸಲಿದೆ. ಯಾರೇ ಸ್ಪರ್ಧಿಸಿದರೂ ನಾವು ಬೆಂಬಲ ನೀಡುತ್ತೇವೆ ಎಂದರು.

ಈಗಾಗಲೇ 12 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಳೆದ ವರ್ಷ ನಡೆದ ಚುನಾವಣೆಗೆ ಹೋಲಿಸಿದರೆ ಶಿರಾ ಹಾಗೂ ಆರ್ ಆರ್ ನಗರ ಕ್ಚೇತ್ರದಲ್ಲಿ ಗೆಲುವು ಸಾಧಿಸಿದರೆ ನಮಗೆ ಮತ್ತಷ್ಟು ಬಲ ಸಿಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!