ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಮೆರಿಕದಲ್ಲಿ ದೋಣಿಯೊಂದು ಕಣ್ಮರೆಯಾಗಿ, ಅದರಲ್ಲಿದ್ದ 20 ಜನ ಮೃತಪಟ್ಟಿದ್ದಾರೆ ಎಂದು ಅಲ್ಲಿನ ನೌಕಾಪಡೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
20 ಜನರಿರುವ ದೋಣಿಯೊಂದು ಡಿ.27 ರಂದು ಪ್ಲೋರಿಡಾ ಕರಾವಳಿ ತೀರದಿಂದ ಬಹಮಾಸ್ ಕಡೆಗೆ ದೋಣಿ ಪ್ರಯಾಣ ಬೆಳೆಸಿತ್ತು. ದೋಣಿಯು ಹೊರಟ ಸ್ಥಳದಿಂದ 130 ಕೀ.ಮೀಟರದಲ್ಲಿ ಕಣ್ಣರೆಯಾಗಿತ್ತು. ದೋಣಿ ಪತ್ತೆಗೆ ನೌಕಪಡೆ 44,000 ಚ. ಕಿ.ಮೀಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಆದರೆ ದೋಣಿ ಪತ್ತೆಯಾಗಿಲ್ಲ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಈದೀಗ ದೋಣಿ ಪತ್ತೆ ಕಾರ್ಯಾ ನಡೆಸುವುದನ್ನು ಸ್ಥಗಿತಗೊಳಿಸಲಾಗಿದ್ದು, ದೋಣಿ ಕಣ್ಮರೆಯಾಗಿದೆ. ಅದರಲ್ಲಿ ಇದ್ದ 20 ಜನರೂ ಮೃತಪಟ್ಟಿದ್ದಾರೆ ಎಂದು ನೌಕಾಪಡೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.