ಹೆಚ್ಚಾಗಿ ಎಲ್ಲರೂ ಟೊಮಾಟೊ ಹಣ್ಣಿನ ಚಟ್ನಿ ಮಾಡುತ್ತಾರೆ. ಟೊಮಾಟೊ ಕಾಯಿ ಚಟ್ನಿ ಮಾಡುವುದು ಕಡಿಮೆ. ಆದರೆ ಈ ಚಟ್ನಿ ದೋಸೆಗೆ, ಅನ್ನಕ್ಕೆ, ಚಪಾತಿ ಎಲ್ಲದರ ಜೊತೆಯೂ ಸೇವಿಸಬಹುದು. ಇಲ್ಲಿದೆ ರೆಸಿಪಿ..
ಬೇಕಾಗುವ ಸಾಮಗ್ರಿ:
ಟೊಮಾಟೊ ಕಾಯಿ 10
ಬಟಾಣಿ 1 ಕಪ್
ಈರುಳ್ಳಿ 1
ಹಸಿಮೆಣಸಿನಕಾಯಿ 5
ಕೊತ್ತಂಬರಿ ಸೊಪ್ಪು
ಕಾಯಿತುರಿ
ಎಣ್ಣೆ ಸಾಸಿವೆ
ಇಂಗು
ಕಡಲೆಬೇಳೆ
ಬೆಳ್ಳುಳ್ಳಿ 5 ಎಸಲು ಜೆಜ್ಜಿ ಇಡಿ
ಧನಿಯಪುಡಿ 1 ಸ್ಪೂನ್
ಜೀರಿಗೆ ಪುಡಿ 1/2 ಸ್ಪೂನ್
ಅರಿಸಿಣ 1/4 ಟೀಸ್ಪೂನ್
ಉಪ್ಪು
ಮಾಡುವ ವಿಧಾನ:
- ಪಾತ್ರೆಗೆ ಎಣ್ಣೆಹಾಕಿ ಕಾಯಿಸಿ ಸಾಸಿವೆ ಹಾಕಿ ಕಡಲೆಬೇಳೆ ಹಾಕಿ ಹುರಿದು ಇಂಗು ಬೆಳ್ಳುಳ್ಳಿ ಹಾಕಿ ಬಟಾಣಿ ಹಾಕಿ ಹುರಿದುಕೊಳ್ಳಿ.
- ನಂತರ ಈರುಳ್ಳಿ ಹಸಿಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದು ಕಟ್ ಮಾಡಿದ ಟೊಮಾಟೊ ಕಾಯಿಯನ್ನ ಹುಳಿ ಹೋಗುವವರೆಗೂ ಹಿಂಡಿ
- ಚನ್ನಾಗಿ ಹುರಿದು 1/4 ಕಪ್ ನೀರು ಹಾಕಿ ಬೇಯಿಸಿ ಉಪ್ಪು ಹಾಕಿ ನೀರು ಡ್ರೈ ಆದಾಗ ಧನಿಯಪುಡಿ ಜೀರಿಗೆ ಪುಡಿ ಅರಿಸಿಣ ಕಾಯಿತುರಿ ಹಾಕಿಮಿಶ್ರಣಮಾಡಿ ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿದರೆ ಟೊಮಾಟೊ ಕಾಯಿ ಚೆಟ್ನಿ ರೆಡಿ.