Wednesday, July 6, 2022

Latest Posts

ದೋಸೆ, ರೊಟ್ಟಿ, ಅನ್ನ ಎಲ್ಲಕ್ಕೂ ಒಂದೇ ಚಟ್ನಿ ಸಾಕು.. ಯಾವುದು ಅಂತೀರಾ? ಈರುಳ್ಳಿ ಚಟ್ನಿ ರೆಸಿಪಿ ಇಲ್ಲಿದೆ..

ಚಟ್ನಿಯನ್ನು ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ಮಾಡುತ್ತಲೇ ಇರುತ್ತಾರೆ. ಒಂದೇ ರೀತಿ ಚಟ್ನಿ ಮಾಡುವುದಕ್ಕಿಂತ ಆಗಾಗ ಬೇರೆ ಬೇರೆ ರೀತಿ ಚಟ್ನಿ ಟ್ರೈ ಮಾಡಬಹುದು. ನೀವು ಈರುಳ್ಳಿ ಚಟ್ನಿ ಮಾಡಿ ನೋಡಿ. ಹೊಸ ರೀತಿಯಲ್ಲಿ ಹೀಗೆ ಮಾಡಬಹುದು…

ಬೇಕಾಗುವ ಸಾಮಗ್ರಿ:

ಈರುಳ್ಳಿ
ಕಾಯಿ ತುರಿ
ಸಾಸಿವೆ
ಉದ್ದಿನ ಬೇಳೆ
ಕರಿ ಬೇವು
ಉಪ್ಪು
ಶುಂಠಿ
ಲಿಂಬು ರಸ
ಒಣಮೆಣಸು

ಮಾಡುವ ವಿಧಾನ:

ಮೊದಲಿಗೆ ಈರುಳ್ಳಿಯನ್ನು ಹೆಚ್ಚಿಕೊಂಡು ಚೆನ್ನಾಗಿ ಹುರಿದುಕೊಳ್ಳಿ.
ಆನಂತರ ಒಂದು ಕಪ್ ಕಾಯಿ ತುರಿಗೆ ಹುರಿದುಕೊಂಡಿರುವ ಈರುಳ್ಳಿ, ಒಣ ಮೆಣಸು ಮತ್ತು ಶುಂಠಿ ಚಿಕ್ಕ ತುಂಡನ್ನು ಹಾಕಿ ರುಬ್ಬಿಕೊಳ್ಳಿ.
ರುಬ್ಬಿಕೊಂಡಿರುವ ಮಿಶ್ರಣಕ್ಕೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಆನಂತರ ರುಚಿಗೆ ತಕ್ಕಷ್ಟು ಉಪ್ಪು, ಲಿಂಬು ರಸ ಹಾಕಿದರೆ ಈರುಳ್ಳಿ ಚಟ್ನಿ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss