Thursday, July 7, 2022

Latest Posts

ದೋಸೆ ಹಿಟ್ಟು ಹೆಚ್ಚಾದರೆ ಬಿಸಾಡುತ್ತೀರಾ? ಊಟಕ್ಕೆ ದೋಸೆ ಹಿಟ್ಟಿನ ಬೋಂಡಾ ಮಾಡಿಕೊಳ್ಳಿ.. ಈಸಿ ರೆಸಿಪಿ..

ದೋಸೆ ಹಿಟ್ಟಿನ ಬೋಂಡಾ ತಿನ್ನುವುದಕ್ಕೂ ರುಚಿ. ಮಾಡುವುದು ಬಹಳ ಸುಲಭ. ಮಕ್ಕಳಿಗೆ ಇದು ಬಹಳ ಇಷ್ಟವಾಗುತ್ತದೆ. ಬೆಳಿಗ್ಗೆ ತಿಂಡಿಗೆಂದು ಮಾಡಿಕೊಂಡ ದೋಸೆ ಹಿಟ್ಟು ಹೆಚ್ಚಾದರೆ ದೋಸೆ ಹಿಟ್ಟಿನ ಬೋಂಡಾ ತಯಾರಿಸಿ. ಇದು ಟೀ ಜೊತೆ ತಿನ್ನುವುದಕ್ಕೆ ಬಹಳ ರುಚಿಯಾಗಿರುತ್ತದೆ. ಹೀಗೆ ಮಾಡಿ…

ಬೇಕಾಗುವ ಪದಾರ್ಥ:

ದೋಸೆ ಹಿಟ್ಟು
ಕೊತ್ತಂಬರಿ ಸೊಪ್ಪು
ಹಸಿ ಮೆಣಸು
ಕ್ಯಾರೆಟ್
ಕಡಲೆ ಹಿಟ್ಟು
ಕರಿ ಬೇವು
ಅಡಿಗೆ ಸೋಡಾ
ಎಣ್ಣೆ

ಮಾಡುವ ವಿಧಾನ:
ದೋಸೆ ಹಿಟ್ಟಿಗೆ ಹಸಿ ಮೆಣಸು, ಕೊತ್ತ್ತಂಬರಿ ಸೊಪ್ಪು, ಕ್ಯಾರೆಟ್ ತುರಿ, ಕರಿ ಬೇವು, ಕಡಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಉಂಡೆ ಕಟ್ಟುವ ರೀತಿಯಲ್ಲಿ ಕಲಸಿಕೊಳ್ಳಿ. ಆನಂತರ ಅದಕ್ಕೆ ಉಪ್ಪು, ಸೋಡಾವನ್ನು ಸೇರಿಸಿಕೊಳ್ಳಿ. ಇವುಗಳನ್ನು ಕಲಸಿ ಒಂದು ತಾಸು ನೆನೆಯಲು ಬಿಡಿ. ಆನಂತರ ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಎಣ್ಣೆಯಲ್ಲಿ ಕರಿಯಿರಿ. ಹೀಗೆ ಮಾಡಿದರೆ ದೋಸೆ ಹಿಟ್ಟಿನ ಬೋಂಡಾ ರೆಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss