Tuesday, July 5, 2022

Latest Posts

ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟಕ್ಕೆಯತ್ನ: ನಾಲ್ವರು ಯುವಕರ ಬಂಧನ

ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಪಲ್ಲಮಜಲು ಪಕ್ಕದಲ್ಲಿ ಆಟೊ ಮತ್ತು ದ್ವಿಚಕ್ರ ವಾಹನದಲ್ಲಿ ಬಂದು ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದಲ್ಲಿ ನಾಲ್ವರು ಯುವಕರನ್ನು ಬಂಟ್ವಾಳ ನಗರ ಪೊಲೀಸರ ತಂಡ ಗುರುವಾರ ಬಂಧಿಸಿದೆ. ಸ್ಥಳೀಯ ನಿವಾಸಿಗಳಾದ ಅಲ್ತಾಫ್ (24), ಅಬ್ದುಲ್ ರಝಾಖ್ (28), ಸಲ್ಮಾನ್ (26) ಮತ್ತು ಪ್ರೀತಮ್ ಮೇನೆಜಸ್ (24) ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ್ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ಪೊಲೀಸರು ದಾಳಿ ನಡೆಸಿದ್ದು, ಸುಮಾರು 170 ಗ್ರಾಂ ಗಾಂಜಾ, ತಲಾ ಒಂದು ಆಟೋರಿಕ್ಷಾ, ಬೈಕ ನ್ನು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss