ಹೊಸ ದಿಗಂತ ವರದಿ ಮೈಸೂರು:
ಇಬ್ಬರು ಕಳ್ಳರನ್ನು ಬಂಧಿಸಿರುವ ಮೈಸೂರಿನ ಉದಯಗಿರಿ ಠಾಣೆಯ ಪೊಲೀಸರು, 8 ಲಕ್ಷ ಮೌಲ್ಯದ 8 ದ್ವಿಚಕ್ರವಾಹನಗಳನ್ನು ಉದಯಗಿರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಶೋಹೇಬ್ (19) ಹಾಗೂ ಅರ್ಬಾಜ್ ಖಾನ್ (19) ಬಂಧಿತರು.
ಉದಯಗಿರಿ ಠಾಣಾ ವ್ಯಾಪ್ತಿಯ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆ ಕಾರ್ಯವನ್ನು ಪೊಲೀಸರು ಅಲಿ ಪಾರ್ಕ್ ಬಳಿ ನಡೆಸುತ್ತಿದ್ದಾಗ ದ್ವಿಚಕ್ರ ವಾಹನಗಳಲ್ಲಿ ಬರುತ್ತಿದ್ದ ಈ ಇಬ್ಬರು ಕಳ್ಳರನ್ನು ಅನುಮಾನದ ಮೇರೆಗೆ ತಡೆದು ನಿಲ್ಲಿಸಿ, ವಿಚಾರಣೆ ಮಾಡಿದಾಗ ಬೈಕ್ಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಇಬ್ಬರು ಕಳ್ಳರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾತ್ರಿ ವೇಳೆಯಲ್ಲಿ ಮನೆಗಳ ಮುಂಭಾಗ ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.
ಉದಯಗಿರಿ ಠಾಣೆ-2, ಸರಸ್ವತಿಪುರಂ-1, ನಜರ್ ಬಾದ್ -2, ನರಸಿಂಹರಾಜ-1, ದೇವರಾಜ-1,ಆಲನಹಳ್ಳಿ ಠಾಣೆಯ-1 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.
ಮೈಸೂರು ನಗರ ಡಿಸಿಪಿ ಗೀತಾಪ್ರಸನ್ನ, ದೇವರಾಜ ವಿಭಾಗದ ಎಸಿಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಲ್ಲಿ ಉದಯಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಂ.ಪೂಣಚ್ಚ ಇತರೆ ಸಿಬ್ಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.