Sunday, June 26, 2022

Latest Posts

ದ್ವಿತೀಯ ಪಿಯುಸಿ : ತುಮಕೂರು ಜಿಲ್ಲೆಗೆ ಶೇ.62.26ರಷ್ಟು ಫಲಿತಾಂಶ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.62.26ರಷ್ಟು ಫಲಿತಾಂಶ ಬಂದಿದೆ ಎಂದು ಪಿಯುಸಿಯಲ್ಲಿ ಡಿಡಿಪಿಐ ನರಸಿಂಹ ಮೂರ್ತಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ : ಜಿಲ್ಲೆಯಲ್ಲಿ 23134 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಕಲಾಗಿದ್ದು 14404 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 62.26ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.3.55ರಷ್ಟು ಫಲಿತಾಂಶ ಕಡಿಮೆ ಆಗಿದೆ.ಕಳೆದ ವರ್ಷ ಶೇ.65.81ರಷ್ಟು ಫಲಿತಾಂಶ ಬಂದಿತ್ತು. ರಾಜ್ಯ ಮಟ್ಟದಲ್ಲಿ ಜಿಲ್ಲೆ 23ನೆಯ ಸ್ಥಾನದಲ್ಲಿದೆ.
ವಿಜ್ಞಾನ ವಿಭಾಗದಲ್ಲಿ 7338 ವಿದ್ಯಾರ್ಥಿಗಳು ಹಾಜರಾಗಿದ್ದು 5681 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 77.42 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 9990ಮಂದಿ ಹಾಜರಾಗಿದ್ದು 6449 ಮಂದಿ ಉತ್ತೀರ್ಣರಾಗಿ ಶೇ.64.55ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ 5806 ವಿದ್ಯಾರ್ಥಿಗಳು ಹಾಜರಾಗಿದ್ದು 2274 ಮಂದಿ ಉತ್ತೀರ್ಣರಾಗಿದ್ಧು ಶೇ 39.17 ಫಲಿತಾಂಶ ಬಂದಿದೆ.
ಪರೀಕ್ಷೆಗೇ ಹಾಜರಾಗಿದ್ಧ12415 ಬಾಲಕರ ಪೈಕೀ 6268 ಉತ್ತೀರ್ಣರಾಗಿ ಶೇ.50.49 ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾಗಿದ್ದ14690ಬಾಲಕೀಯರ ಪೈಕಿ 9242 ಮಂದಿ ಪಾಸ್ ಆಗಿದ್ದು, ಶೇ.62.91ಫಲಿತಾಂಶ ಬಂದಿದೆ. ನಗರದ ವಿದ್ಯಾರ್ಥಿಗಳೇ ಮೇಲುಗೈ ಸಾಧಿಸಿದ್ದು 17501 ನಗರ ವಿದ್ಯಾರ್ಥಿಗಳ ಪೈಕಿ284ರ ಮಂದಿ ಪಾಸಾಗಿದ್ದೇನೆಂದೂ ಶೇ.64.48.ಫಲಿತಾಂಶ ಬಂದಿದೆ.ಪರೀಕ್ಷೆಗೆ ಹಾಜರಾಗಿದ್ಧ ಗ್ರಾಮೀಣ ಪ್ರದೇಶದ 5633 ವಿದ್ಯಾರ್ಥಿಗಳ ಪೈಕಿ 3120 ವಿದ್ಯಾರ್ಥಿಗಳು ಪಾಸಾಗಿದ್ದೇನೆಂದೂ ಶೇ.53.39.ಫಲಿತಾಂಶ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss